ಬೆಂಗಳೂರು, ಮಾ 01 (DaijiworldNews/HR): ಬಾಲನಟಿಯಾಗಿ ಸಿನಿಮಾ ಲೋಕಕ್ಕೆ ಕಾಲಿಟ್ಟಿದ್ದ ಎಚ್ ಎಸ್ ಕೀರ್ತನಾ ಅವರು ಇದೀಗ ಐಎಎಸ್ ಅಧಿಕಾರಿಯಾಗಿ ಎಲ್ಲರಿಗೂ ಮಾದರಿಯಾಗಿದ್ದಾರೆ.
ಬಾಲನಟಿಯಾಗಿದ್ದ ಎಚ್ ಎಸ್ ಕೀರ್ತನಾ ಅವರಿಗೆ ಸಿನಿಮಾದಲ್ಲಿ ಅನೇಕ ಅವಕಾಶಗಳು ಬಂದರು ಅದರತ್ತ ಮುಖಮಾಡದೇ ಸತತ ಪ್ರಯತ್ನದಿಂದ ಆರನೇ ಬಾರಿಗೆ ಪರೀಕ್ಷೆ ಬರೆದು ಯಶಸ್ವಿಯಾಗಿ ಪಾಸ್ ಆಗಿದ್ದಾರೆ.
ಕೀರ್ತನಾ ಅವರು 2013 ರಲ್ಲಿ ಮೊದಲ ಬಾರಿಗೆ UPSC CSE ಪರೀಕ್ಷೆ ಬರೆದಿದ್ದು, 2020 ರಲ್ಲಿ ಅವರು 167 ರ ಅಖಿಲ ಭಾರತ ಶ್ರೇಣಿ (AIR) ಯೊಂದಿಗೆ IAS ಅಧಿಕಾರಿಯಾದರು.
ಇನ್ನು ಈಗ ದಕ್ಷಿಣ ಚಿತ್ರರಂಗದ ಈ ಬಾಲ ಕಲಾವಿದೆ ಐಎಎಸ್ ಅಧಿಕಾರಿಯಾಗಿದ್ದು, ಕರ್ನಾಟಕದ ಮಂಡ್ಯ ಜಿಲ್ಲೆಯಲ್ಲಿ ಸಹಾಯಕ ಆಯುಕ್ತರಾಗಿ ಮೊದಲ ಪೋಸ್ಟಿಂಗ್ ಸೇರಿದ್ದರು.
ಕೀರ್ತನಾ ಅವರು ಕರ್ಪೂರದ ಗೊಂಬೆ, ಗಂಗಾ-ಯಮುನಾ, ಮುದ್ದಿನ ಅಳಿಯ, ಉಪೇಂದ್ರ, ಎ, ಕಾನೂರು ಹೆಗ್ಗಡತಿ, ಸರ್ಕಲ್ ಇನ್ಸ್ಪೆಕ್ಟರ್, ಓ ಮಲ್ಲಿಗೆ, ಲೇಡಿ ಕಮಿಷನರ್, ಹಬ್ಬ, ದೊರೆ, ಸಿಂಹಾದ್ರಿ, ಜನನಿ, ಚಿಗುರು ಸಿನಿಮಾಗಳು ಸೇರಿದಂತೆ ಅನೇಕ ಸೀರಿಯಲ್ ಗಳಲ್ಲಿಯೂ ನಟಿಸಿದ್ದಾರೆ.