ಬೆಂಗಳೂರು,ಮಾ 01 (DaijiworldNews/ AK): ಜಯಪ್ರಕಾಶ್ ಹೆಗ್ಡೆ ಅವರ ಸಮಿತಿಯು ಸಲ್ಲಿಸಿರುವ ಜಾತಿಗಣತಿ ವರದಿಯನ್ನು ರಾಜ್ಯ ಸರ್ಕಾರ ಅನುಷ್ಠಾನಕ್ಕೆ ತರಬಾರದು ಎಂದು ರಾಜ್ಯ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ ಒತ್ತಾಯಿಸಿದೆ.
ಕಾಂತರಾಜು ಅವರ ಸಮಿತಿಯ ವರದಿಯನ್ನ ಜಯಪ್ರಕಾಶ್ ಹೆಗ್ಡೆ ಅವರ ಸಮತಿ ನಿನ್ನೆ ರಾಜ್ಯ ಸರ್ಕಾರಕ್ಕೆ ಸಲ್ಲಿಕೆ ಮಾಡಿದೆ. ಈ ವರದಿಯನ್ನ ಸರ್ಕಾರ ಅನುಷ್ಠಾನಕ್ಕೆ ತರಬಾರದು. ಇದು 10 ವರ್ಷಗಳ ಹಳೆಯ ಸಮೀಕ್ಷೆಯ ವರದಿ. ಈ ವರದಿಯ ಮೇಲೆ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡರೂ ನಮ್ಮ ಒಕ್ಕಲಿಗ ಸಮಾಜ ಒಪ್ಪುವುದಿಲ್ಲ. ಮುಂದೆ ಉಗ್ರ ಸ್ವರೂಪದ ಹೋರಾಟ ಮಾಡಬೇಕಾಗುತ್ತೆ ಎಂದು ಸರ್ಕಾರಕ್ಕೆ ಸಮಿತಿ ಎಚ್ಚರಿಕೆ ನೀಡಿದೆ.
ಹೊಸದೊಂದು ಸಮಿತಿ ಮಾಡಿ ಸಾಮಾಜಿಕ-ಆರ್ಥಿಕ ಗಣತಿ ಮಾಡಿಸಿ. ಈ ವರದಿ ಔಟ್ಡೇಟ್ ಆಗಿದೆ. ಇದರಿಂದ ಯಾವುದೇ ನ್ಯಾಯ ಸಿಗುವುದಿಲ್ಲ. ಇದರಿಂದ ಜನರಲ್ಲಿ ಬಿರುಕು ಮೂಡುತ್ತದೆ. ಸರ್ಕಾರ ಈ ರೀತಿ ಆಗದಂತೆ ನಿಗಾವಹಿಸಬೇಕು ಎಂದು ಆಗ್ರಹಿಸಿದೆ.
ನಾವು ನಮ್ಮ ಸಮಾಜದ ನಾಯಕರು ನಿರ್ಮಲಾನಾಂದನಾಥ ಸ್ವಾಮಿಗಳ ನೇತೃತ್ವದಲ್ಲಿ ಸಭೆ ಮಾಡಿ ಸರ್ಕಾರಕ್ಕೆ ಮತ್ತೊಮ್ಮೆ ಮನವಿ ಮಾಡುತ್ತೇವೆ. ಸರ್ಕಾರ ಇದನ್ನ ಸ್ವೀಕರಿಸಿ ಕಾರ್ಯರೂಪಕ್ಕೆ ತರುವ ಯೋಜನೆ ಮಾಡಿದ್ರೆ ಹೋರಾಟ ಮಾಡಲೇ ಬೇಕಾಗುತ್ತದೆ ಎಂದು ಸಮಿತಿಯ ಅಧ್ಯಕ್ಷ ಶ್ರೀಕಂಠಯ್ಯ ಎಚ್ಚರಿಸಿದ್ದಾರೆ.