ಬೆಂಗಳೂರು, ಮಾ 03(DaijiworldNews/AK): ಆರೋಗ್ಯ ಇಲಾಖೆಯು ರಾಜ್ಯದಾದ್ಯಂ ತ ಭಾನುವಾರ (ಮಾ.3) ಪಲ್ಸ್ ಪೋಲಿಯೊ ಕಾರ್ಯಕ್ರಮವನ್ನು ಆರೋಗ್ಯ ಇಲಾಖೆಯು ಹಮ್ಮಿಕೊಂಡಿದೆ. 5 ವರ್ಷ ದೊಳಗಿನ 62.85 ಲಕ್ಷ ಮಕ್ಕಳನ್ನು ತಲುಪುವ ಗುರಿ ಹಾಕಿಕೊಂಡಿದೆ.
ದೇಶವು ಪೋಲಿಯೊಮುಕ್ತ ರಾಷ್ಟ್ರವಾಗಿದೆ. ಇದು ಮಹತ್ತರವಾದ ಸಾಧನೆಯಾದರೂ ಈ ಸಮಸ್ಯೆ ಜಗತ್ತಿನ ವಿವಿಧೆಡೆ ಮಕ್ಕಳನ್ನು ಬಾಧಿಸುತ್ತಿದೆ. ಇದು ಭಾರತದ ಆತಂಕಕ್ಕೆ ಕಾರಣವಾಗಿದೆ.
ವೈದ್ಯಕೀಯ ತಜ್ಞರ ಶಿಫಾರಸಿನ ಅನ್ವಯ ದೇಶದಲ್ಲಿ ಐದು ವರ್ಷ ದೊಳಗಿನ ಎಲ್ಲ ಮಕ್ಕಳಿಗೂ ಪಲ್ಸ್ ಪೋ ಲಿಯೊ ಹನಿ ಹಾಕಲಾಗುತ್ತಿದೆ.ರಾಜ್ಯದಲ್ಲಿ ಪೋಲಿಯೊ ಹನಿ ವಿತರಣೆಗೆ 33,712 ಬೂತ್ಗಳನ್ನು ಗುರುತಿಸಲಾಗಿದೆ.
963 ಸಂಚಾರಿ ತಂಡಗಳು ರೈಲು ನಿಲ್ದಾಣ, ಬಸ್ ನಿಲ್ದಾಣ ಸೇರಿದಂ ತೆ ವಿವಿಧ ಸಾರ್ವ ಜನಿಕ ಪ್ರದೇ ಶಗಳಲ್ಲಿ ಲಸಿಕೆ ವಿತರಿಸಲಿವೆ. ಈ ಕಾರ್ಯ ಕ್ರಮಕ್ಕೆ 1.11 ಲಕ್ಷ ಕಾರ್ಯಕರ್ತರನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಐದು ವರ್ಷ ದೊಳಗಿನ ಎಲ್ಲ ಮಕ್ಕಳೂ ಲಸಿಕೆ ಪಡೆದುಕೊಳ್ಳಬೇಕು. ಈ ಲಸಿಕೆಯು ಸಂಪೂರ್ಣ ಸುರಕ್ಷಿತವಾಗಿದ್ದು, ವದಂತಿಗಳಿಗೆ ಕಿವಿಗೊಡಬಾರದು. ಪೋಲಿಯೊ ವಿರುದ್ಧದ ಹೋರಾಟದಲ್ಲಿ ವಿಜಯ ಸಾಧಿಸುವುದನ್ನು ಮುಂದುವರಿಸಲು ಕೈಜೋಡಿಸಬೇ ಕು.
ರಾಜ್ಯದ ಎಲ್ಲಆಸ್ಪತ್ರೆಗಳು, ರೈಲು ನಿಲ್ದಾಣ, ಮೆಟ್ರೊ ನಿಲ್ದಾಣ, ವಿಮಾನ ನಿಲ್ದಾಣ, ಗ್ರಾಮೀ ಣ ಪ್ರದೇಶ, ಗುಡ್ಡಗಾಡು ಪ್ರದೇಶ ಸೇರಿದಂತೆ ವಿವಿಧೆಡೆ ಲಸಿಕೆ ಹಾಕಲು ವ್ಯವಸ್ಥೆ ಮಾಡಲಾಗಿದೆ ಎಂದು ಇಲಾಖೆ ತಿಳಿಸಿದೆ.
ಹೆಚ್ಚಿನ ಮಾಹಿತಿಗೆ ಹತ್ತಿರದ ಆರೋ ಗ್ಯ ಕೇಂದ್ರವನ್ನು ಭೇ ಟಿ ಮಾಡಬಹುದು. ಅಲ್ಲದೇ ಆರೋ ಗ್ಯ ಕಾರ್ಯ ಕರ್ತರನ್ನು ಸಂಪರ್ಕಿಸಬಹುದು.