ಬೆಂಗಳೂರು, ಮಾ 03(DaijiworldNews/SK): ಬ್ರ್ಯಾಂಡ್ ಬೆಂಗಳೂರು ಆಗದಿದ್ದರು ಪರವಾಗಿಲ್ಲ ಬಾಂಬ್ ಬೆಂಗಳೂರು ಮಾಡಬೇಡಿ" ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿಕೆ ನೀಡಿದ್ದರು. ಇದೀಗ ಈ ವಿಚಾರಕ್ಕೆ ಸಂಸದ ಡಿಕೆ ಸುರೇಶ್ ತಿರುಗೇಟು ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಡಿಕೆ ಸುರೇಶ್ , ದೇಶಭಕ್ತಿ ಹೆಸರು ಹೇಳಿಕೊಂಡು ಬೆಂಗಳೂರಿನ ಭದ್ರತೆ ಹಾಳು ಮಾಡುತ್ತಿರುವರು ಬಿಜೆಪಿ ಪಕ್ಷದವರು. ಯಾರೇ ಬಾಂಬ್ ಹಾಕಿದ್ರೂ ಸರ್ಕಾರ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತದೆ. ಆದರೆ ಅಶೋಕ್ ಅವರು ಬಾಂಬ್ ಬೆಂಗಳೂರು ಅಂದಿದ್ದು ಸರಿನಾ ಎಂದು ಪ್ರಶ್ನಿಸಿದ್ದಾರೆ.
ಹಸಿರು ಬೆಂಗಳೂರು ನಗರವನ್ನು ಗಾರ್ಬೇಜ್ ಸಿಟಿ ಮಾಡಿ 40% ಮಾಡಿದ್ದು ಇದೇ ಬಿಜೆಪಿ. ಈಗ ಇಂತಹ ಕೀಳು ಮಟ್ಟದ ಪದಗಳನ್ನು ಬಳಕೆ ಮಾಡುವ ಬದಲು ಅಭಿವೃದ್ಧಿ ಬಗ್ಗೆ ಮಾತನಾಡಲಿ.
ಇನ್ನು ಭದ್ರತೆ, ಸಾರ್ವಜನಿಕರ ರಕ್ಷಣೆ ನಮಗೂ ಮುಖ್ಯನೇ. ಈ ಕೇಸ್ ಅನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಕೇಂದ್ರದ ಜವಾಬ್ದಾರಿಯೂ ಇದರಲ್ಲಿ ಇದೆ. ಎರಡೂ ಸರ್ಕಾರಗಳು ಒಟ್ಟಾಗಿ ಈ ಪ್ರಕರಣದಲ್ಲಿ ಕೆಲಸ ಮಾಡುತ್ತಿವೆ. ಬೆಂಗಳೂರಿಗೆ 10 ವರ್ಷಗಳಲ್ಲಿ ಮೋದಿ ಸರ್ಕಾರ ಏನು ಅನುದಾನ ಕೊಟ್ಟಿದೆ ಎಂದು ಅಶೋಕ್ ಮಹಾರಾಜರು ಬಿಡುಗಡೆ ಮಾಡಲಿ ತದನಂತರ ಅವರ ಮಾತಿಗೆ ಉತ್ತರ ಕೊಡುತ್ತೇನೆ ಎಂದಿದ್ದಾರೆ.