ತೆಲಂಗಾಣ, ಮಾ 04(DaijiworldNews/SK): ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ತೆಲಂಗಾಣದ ಆದಿಲಾಬಾದ್ನಲ್ಲಿ 56,000 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು.
ಈ ಯೋಜನೆಗಳು ವಿದ್ಯುತ್ ಯೋಜನೆಗಳ ಮೇಲೆ ಕೇಂದ್ರೀಕರಿಸುವ ಮೂಲಕ ವಿದ್ಯುತ್, ರೈಲು ಮತ್ತು ರಸ್ತೆ ಕ್ಷೇತ್ರಗಳಿಗೆ ಸಂಬಂಧಿಸಿವೆ ಎಂದು ತಿಳಿದು ಬಂದಿದೆ.
ಸೋಮವಾರದಿಂದ ಮುಂದಿನ 10 ದಿನಗಳಲ್ಲಿ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಭೇಟಿ ನೀಡಿ ಕನಿಷ್ಠ 29 ಕಾರ್ಯಕ್ರಮಗಳಲ್ಲಿ ಭಾಗವಹಿಸಲಿರುವ ಪ್ರಧಾನಿ ಅವರು ಇಂದು ಬೆಳಗ್ಗೆ ತೆಲಂಗಾಣ ತಲುಪಿದ್ದಾರೆ.
ತೆಲಂಗಾಣಕ್ಕೆ ಭೇಟಿ ನೀಡಿದ ಮೊದಲ ಹಂತದಲ್ಲಿ ಪ್ರಧಾನಮಂತ್ರಿಯವರು, ಇತರ ಯೋಜನೆಗಳ ಜೊತೆಗೆ, ಪೆದ್ದಪಲ್ಲಿಯಲ್ಲಿ ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಶನ್ (NTPC) ತೆಲಂಗಾಣ ಸೂಪರ್ ಥರ್ಮಲ್ ಪವರ್ ಪ್ರಾಜೆಕ್ಟ್ನ 800 MW (ಯುನಿಟ್-2) ಅನ್ನು ದೇಶಕ್ಕೆ ಸಮರ್ಪಿಸಿದರು.
ಈ ಬಗ್ಗೆ ಮಾತನಾಡಿದ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರು, 'ಪ್ರಧಾನಿ ಎಂದರೆ ಹಿರಿಯ ಸಹೋದರನಂತೆ. ಮೋದಿ ತವರು ರಾಜ್ಯವಾದ ಗುಜರಾತ್ನಂತೆ ಪ್ರಗತಿ ಸಾಧಿಸಲು ರಾಜ್ಯಕ್ಕೆ ಅವರ ಬೆಂಬಲ ಬೇಕು ಅಗತ್ಯ ಎಂದು ಹೇಳಿದ್ದಾರೆ.