ಕೋಲ್ಕತ್ತ, ಮಾ 06(DaijiworldNews/SK): ಇಡಿ ತಂಡದ ಮೇಲೆ ಗುಂಪು ದಾಳಿ ಪ್ರಕರಣದ ಆರೋಪಿ ಶಹಜಹಾನ್ ಶೇಖ್ ಅವರನ್ನು, ಕಲ್ಕತ್ತ ಹೈಕೋರ್ಟ್ ಆದೇಶದಂತೆ, ಸಿಬಿಐ ಬುಧವಾರ ತನ್ನ ವಶಕ್ಕೆ ಪಡೆದಿದೆ ಎಂದು ವರದಿಯಾಗಿದೆ.
ಮೂಲಗಳ ಪ್ರಕಾರ, ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಸಿಬಿಐಗೆ ವಹಿಸಬೇಕು ಹಾಗೂ ಪ್ರಕರಣದ ಆರೋಪಿಯಾಗಿರುವ ಶಹಜಹಾನ್ ಶೇಖ್ ಅವರನ್ನು ಸಂಜೆ 4.30ರ ಒಳಗೆ ಸಿಬಿಐಗೆ ಹಸ್ತಾಂತರಿಸಬೇಕು ಎಂದು ಕಲ್ಕತ್ತ ಹೈಕೋರ್ಟ್ ಮಂಗಳವಾರ ಆದೇಶಿಸಿತ್ತು.
ಈ ಆದೇಶವನ್ನು ಪ್ರಶ್ನಿಸಿ ಪಶ್ಚಿಮ ಬಂಗಾಳ ಸರ್ಕಾರ ಮಾ ೫ರಂದು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಆದರೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಬುಧವಾರ ಹೊಸದಾಗಿ ನಿರ್ದೇಶನ ನೀಡಿದ ಹೈಕೋರ್ಟ್, ‘ಶಹಜಹಾನ್ ಶೇಖ್ ಅವರನ್ನು ಸಿಬಿಐ ವಶಕ್ಕೆ ನೀಡುವಂತೆ ಸೂಚಿಸಿ ಮಂಗಳವಾರ ತಾನು ನೀಡಿದ್ದ ಆದೇಶವನ್ನು ತಕ್ಷಣವೇ ಜಾರಿಗೊಳಿಸಬೇಕು’ ಎಂದು ನಿರ್ದೇಶನ ನೀಡಿತ್ತು.
ಇನ್ನು ಸಿಬಿಐ ವಶಕ್ಕೆ ನೀಡುವುದಕ್ಕೂ ಮುನ್ನ ಸಿಐಡಿ ಅಧಿಕಾರಿಗಳು ಶಹಜಹಾನ್ ಶೇಖ್ ಅವರನ್ನು ಆರೋಗ್ಯ ತಪಾಸಣೆಗಾಗಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು ತಪಾಸಣೆ ನಡೆಸಿ ಜಾಮ್ ಪ್ಯಾಲೇಸ್ನಲ್ಲಿರುವ ಕಚೇರಿಗೆ ಕರೆದೊಯ್ಯಿತು ಎಂದು ತಿಳಿದು ಬಂದಿದೆ.