ತಮಿಳುನಾಡು, ಮಾ 07(DaijiworldNews/SK): ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿರುವ ಯುಪಿಎಸ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಸುಲಭದ ಮಾತಲ್ಲ. ಅದರಲ್ಲೂ ಜೀವದಲ್ಲಿ ಏನದರೂ ಸಾಧನೆ ಮಾಡಲು ಹೊರಟಾಗ ಚುಚ್ಚು ಮಾತಾಡಿ ಕುಗ್ಗಿಸುವವರೇ ಹೆಚ್ಚು. ಆದರೆ ಇಲೊಬ್ಬರು ಇತರರ ಮಾತಿಗೆ ತಲೆಕೆಡಿಸಿಕೊಳ್ಳದೇ ಯುಪಿಎಸ್ ಸಿ ಪರೀಕ್ಷೆ ಎದುರಿಸಿ ಮೊದಲ ಪ್ರಯತ್ನದಲ್ಲೇ ತೇರ್ಗಡೆಯಾದ ದಿವ್ಯ ಪ್ರಭು ಜಿ.ಆರ್.ಜೆ ಯಶೋಗಾಥೆ.
ದಿವ್ಯ ಪ್ರಭು ಅವರು ಗುಜರಾತ್ ನಲ್ಲಿ ಜನಿಸಿದರು. ಇವರ ತಂದೆ ಮದ್ರಾಸ್ ಹೈಕೋರ್ಟ್ನಲ್ಲಿ ಅಡ್ವೊಕೇಟ್, ತಾಯಿ ಸರ್ಕಾರಿ ಉದ್ಯೋಗಿ. ಇದರಿಂದಲೇ ದಿವ್ಯ ಅವರಿಗೆ ಪ್ರಾಥಮಿಕ ಹಂತದ ಶಿಕ್ಷಣದಿಂದಲೇ ನಾಗರಿಕ ಸೇವೆ ಬಗ್ಗೆ ಒಲವು ಮೂಡಿತ್ತು.
ತಮಿಳುನಾಡಿನಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮುಗಿಸಿದ ದಿವ್ಯ ಅವರು ಅಗ್ರಿಕಲ್ಚರ್ ವಿವಿಯಲ್ಲಿ ಬಿಎಸ್ಸಿಯಲ್ಲಿ ಪದವಿ ಪಡೆದರು. ಇನ್ನು ಪದವಿ ಮುಗಿಯುತ್ತಿದ್ದಂತೆ ಮೆಡಿಕಲ್ ಸೀಟು ಸಿಕ್ಕರೂ ಐಎಎಸ್ ಕನಸು ಕಂಡಿದ್ದ ಅವರು ಅದನ್ನು ತ್ಯಜಿಸಿ ನಾಗರಿಕ ಸೇವಾ ಪರೀಕ್ಷೆಗೆ ತಯಾರಿ ನಡೆಸಿದರು.
6ನೇ ತರಗತಿಯಿಂದಲೇ ಐಎಎಸ್ ಪರೀಕ್ಷೆ ಎದುರಿಸಿ ಸಿವಿಲ್ ಸರ್ವಿಸ್ ಸೇರಬೇಕು ಎನ್ನುವ ಆಸೆ ಇದ್ದಿದ್ದರಿಂದ ಅವರಿಗೆ ಓದು ಕಷ್ಟ ಎನಿಸಲಿಲ್ಲ. ಯುಪಿಎಸ್ ಸಿ ತಯಾರಿಯ ಜೊತೆಗೆ ಬ್ಯಾಂಕಿಗ್ ಪರೀಕ್ಷೆ ಬರೆದ ಇವರಿಗೆ ಸ್ಪರ್ಧಾತ್ಮಕ ಪರೀಕ್ಷೆ ಹೇಗೆ ಎದುರಿಸಬಹುದು ಎಂಬ ಆತ್ಮ ವಿಶ್ವಾಸ ಮೂಡಿತು. ಬ್ಯಾಂಕಿಗ್ ಪರೀಕ್ಷೆ ಬರೆದ ದಿವ್ಯ ಅವರು ರಿಸಲ್ಟ್ ಬಂದಾಗ ಸುಮಾರು 12 ಬ್ಯಾಂಕ್ಗಳಿಗೆ ಆಯ್ಕೆ ಆಗಿದ್ದರು. ಆದರೆ ಐಎಸ್ಎಸ್ ಅಧಿಕಾರಿಯಾಗಬೇಕೆಂಬ ಕನಸು ಕಂಡಿದ್ದರಿಂದ ಕೆಲಸಕ್ಕೆ ಸೇರಿಕೊಳ್ಳಲಿಲ್ಲ.
ಇದೇ ಸಂದರ್ಭದಲ್ಲಿ ದಿವ್ಯ ಅವರು ಕರ್ನಾಟಕದವರವರನ್ನು ಮದುವೆಯಾದರು. ಮದುವೆಯ ನಂತರ ಕೆಲಸ ಮಾಡುತ್ತಲೇ ಉಳಿದ ಸಮಯವನ್ನು ಓದಿಗೆ ಮೀಸಲಿಡುತ್ತ ಪರೀಕ್ಷೆ ನಿತ್ಯವು ಪತಿಕೆಗಳು, ಅಧ್ಯಯನ ಸಾಮಾಗ್ರಿ ಹಾಗೂ ಪೂರಕ ಪಠ್ಯಗಳನ್ನು ಓದುತ್ತ ಸಿದ್ದತೆಯನ್ನು ನಡೆಸುತ್ತಿದ್ದರು. ಇನ್ನು ಈ ಸಮಯದಲ್ಲಿ ಅವರು ಬಾಣಂತಿಯಾಗಿದ್ದರು. ಆದರೂ ಪರೀಕ್ಷೆ ಬರೆಯಲು ಮುಂದಾದ ದಿವ್ಯ ಅವರಿಗೆ ಬಹುತೇಕ ಮಂದಿ ವ್ಯಂಗ್ಯ ಮಾತಿನಿಂದ ನಿಂದಿಸುತ್ತಿದ್ದರು. ಆದರೆ ಅವರು ಈ ಎಲ್ಲಾ ಮಾತುಗಳಿಗೆ ತಲೆಕೆಡಿಸಿಕೊಳ್ಳದೇ 2013ರಲ್ಲಿ ಐಎಎಸ್ ಪರೀಕ್ಷೆ ಎದುರಿಸಿ ಮೊದಲ ಪ್ರಯತ್ನದಲ್ಲೇ ತೇರ್ಗಡೆಯಾಗುದರ ಮೂಲಕ ಇತರರಿಗೆ ಪ್ರೇರಣೆಯಾಗಿದ್ದಾರೆ