ನವದೆಹಲಿ, ಮಾ 07 (DaijiworldNews/AA): ಲಿಕ್ಕರ್ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಜಾರಿ ನಿರ್ದೇಶನಾಲಯ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ಹಲವು ಬಾರಿ ಸಮನ್ಸ್ ನೀಡಿತ್ತು. ಇದಕ್ಕೆ ಸ್ಪಂದಿಸದ ಕೇಜ್ರಿವಾಲ್ ಅವರಿಗೆ ಇದೀಗ ಸ್ವತಃ ದೆಹಲಿ ಕೋರ್ಟ್ ಸಮನ್ಸ್ ನೀಡಿದ್ದು, ಮಾರ್ಚ್ 16ಕ್ಕೆ ಕೋರ್ಟ್ಗೆ ಹಾಜರಾಗುವಂತೆ ಸೂಚಿಸಿದೆ.
ಜಾರಿ ನಿರ್ದೇಶನಾಲಯವು ಎಂಟು ಬಾರಿ ಕೇಜ್ರಿವಾಲ್ ಅವರಿಗೆ ಸಮನ್ಸ್ ನೀಡಿತ್ತು. ಆದರೆ ಕೇಜ್ರಿವಾಲ್ ಅವರು ಸ್ಪಂದಿಸುತ್ತಿಲ್ಲ ಎಂದು ಇಡಿ ದೂರು ದಾಖಲು ಮಾಡಿತ್ತು. ಈ ಹಿನ್ನೆಲೆ ದೆಹಲಿ ಕೋರ್ಟ್ ಇದೀಗ ಸ್ವತಃ ಸಮನ್ಸ್ ಹೊರಡಿಸಿದೆ.
ಮಾರ್ಚ್ 4ಕ್ಕೆ ಎಂಟನೇ ಬಾರಿ ಇಡಿ ಕೇಜ್ರಿವಾಲ್ ಅವರಿಗೆ ಸಮನ್ಸ್ ನೀಡಿತ್ತು. ಮೊದಲು ಮೂರು ಬಾರಿ ನೀಡಿದ ಸಮನ್ಸ್ಗೆ ಕೇಜ್ರೀವಾಲ್ ಹಾಜರಾಗದ ಹಿನ್ನೆಲೆ ಸ್ಥಳೀಯ ಕೋರ್ಟ್ ಗೆ ಇಡಿ ದೂರು ನೀಡಿತ್ತು. ಆ ಬಳಿಕ ನೀಡಿದ ಐದು ಸಮನ್ಸ್ಗಳಿಗೂ ಅವರು ಸ್ಪಂದಿಸುತ್ತಿಲ್ಲ ಎಂದು ಇಡಿ ಮತ್ತೊಮ್ಮೆ ದೂರು ನೀಡಿದೆ. ಈ ಹಿನ್ನೆಲೆ ಇದೀಗ ದೆಹಲಿ ನ್ಯಾಯಾಲಯ ಮಾರ್ಚ್ 16ಕ್ಕೆ ಕೋರ್ಟ್ ಗೆ ಹಾಜರಾಗುವಂತೆ ಕೇಜ್ರಿವಾಲ್ಗೆ ತಿಳಿಸಿದೆ.