ನವದೆಹಲಿ, ಮಾ 10(DaijiworldNews/AK): ಮನೆಯಲ್ಲಿ ಗಂಡ ಒಂದು ವೇಳೆ ಮೋದಿ ಮೋದಿ ಎಂದರೆ ಆತನಿಗೆ ಊಟ ನೀಡಬೇಡಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಮಹಿಳೆಯರಿಗೆ ಕಿವಿಮಾತು ಹೇಳಿದ್ದಾರೆ.
ಅವರು ದೆಹಲಿಯಲ್ಲಿ ‘ಮಹಿಳಾ ಸಮ್ಮಾನ್ ಸಮರೋಹ್’ ಕಾರ್ಯಕ್ರಮವನ್ನು ಉದ್ದೇ ಶಿಸಿ ಮಾತನಾಡಿ, ಅನೇಕ ಪುರುಷರು ಪ್ರಧಾನಿ ಮೋದಿಯವರ ಹೆಸರನ್ನು ಜಪಿಸುತ್ತಿದ್ದಾರೆ, ಆದರೆ ನೀವು ಅವರನ್ನು ಸರಿ ಮಾಡಬೇಕು.ಮೋದಿಯವರ ಹೆಸರನ್ನು ಜಪಿಸಿದರೆ ರಾತ್ರಿಯ ಊಟವನ್ನು ನೀಡುವುದಿಲ್ಲ ಎಂದು ಹೇಳಿ ಎಂದು ಕೇಜ್ರಿವಾಲ್ ಸಲಹೆ ನೀಡಿದ್ದಾರೆ.
ದೆಹಲಿ ಸರ್ಕಾರವು ತನ್ನ 2024-25 ರ ಬಜೆಟ್ ನಲ್ಲಿ 18 ವರ್ಷಕ್ಕಿಂ ತ ಮೇಲ್ಪಟ್ಟ ಎಲ್ಲಾ ಮಹಿಳೆಯರಿಗೆ ಮಾಸಿಕ 1,000 ರೂ. ಮೊತ್ತವನ್ನು ಒದಗಿಸುವ ಯೋಜನೆಯನ್ನು ಘೋಷಿಸಿದ ನಂತರ ಮಹಿಳೆಯರೊಂದಿಗೆ ಸಂವಾದ ನಡೆಸಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಮಹಿಳೆಯರು ಎಎಪಿ ಬೆಂಬಲಿಸುವುದಾಗಿ ತಮ್ಮ ಕುಟುಂಬ ಸದಸ್ಯರ ಮೇಲೆ ಪ್ರಮಾಣ ಮಾಡುವಂತೆ ಮಹಿಳೆಯರಿಗೆ ಹೇಳಿದರು.ಬಿಜೆಪಿಯನ್ನು ಬೆಂಬಲಿಸುವ ಇತರ ಮಹಿಳೆಯರಿಗೆ ನಿಮ್ಮ ಸಹೋದರ ಕೇಜ್ರಿವಾಲ್ ಮಾತ್ರ ನಿಮ್ಮ ಬೆಂಬಲಕ್ಕೆ ನಿಲ್ಲುತ್ತಾರೆ ಎಂದು ಹೇಳಬೇಕು ಎಂದು ಈ ವೇಳೆ ಕೇಜ್ರಿವಾಲ್ ಮಹಿಳೆಯರಿಗೆ ಕರೆ ನೀಡಿದರು.
ನಾನು ಅವರ ಕರೆಂಟ್ ಫ್ರೀ ಮಾಡಿದ್ದೇನೆ, ಅವರ ಬಸ್ ಟಿಕೆಟ್ ಉಚಿತ ಮಾಡಿದ್ದೇನೆ ಎಂದು ಹೇಳಿ, ಈಗ ನಾನು ಪ್ರತಿ ತಿಂಗಳು
ಮಹಿಳೆಯರಿಗೆ ಈ 1,000 ರೂಗಳನ್ನು ನೀಡುತ್ತಿದ್ದೇ ನೆ, ಬಿಜೆಪಿ ಅವರಿಗೆ ಏನು ಮಾಡಿದೆ? ಬಿಜೆಪಿಗೆ ಏಕೆ ಮತ ಹಾಕಬೇಕು? ಈ ಬಾರಿ ಕೇಜ್ರಿವಾಲ್ ಗೆ ಮತ ಹಾಕಿ” ಎಂದು ಹೇಳಿದರು.