ಕೋಲ್ಕತ್ತಾ, ಮಾ 10(DaijiworldNews/AA): ಇದೇ ಮೊದಲ ಬಾರಿಗೆ ಪಶ್ಚಿಮ ಬಂಗಾಳ ಸರ್ಕಾರವು ರಾಮನವಮಿ ದಿನ ಸಾರ್ವತ್ರಿಕ ರಜೆ ಎಂದು ಘೋಷಿಸಿದೆ.
ಈ ಮೊದಲಿನಿಂದಲೂ ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜೆ ಹಾಗೂ ಕಾಳಿ ಪೂಜೆ ಈ ಎರಡು ಹಿಂದೂ ಹಬ್ಬಗಳಿಗೆ ಸಾರ್ವತ್ರಿಕ ರಜೆ ಇದೆ. ಆದರೆ ಬಂಗಾಳದಲ್ಲಿ ಇದೇ ಮೊದಲ ಬಾರಿಗೆ ರಾಮನವಮಗೆ ಸಾರ್ವತ್ರಿಕ ರಜೆ ಘೋಷಿಸಲಾಗಿದ್ದು, ಈ ಬಗ್ಗೆ ಸರ್ಕಾರ ಶನಿವಾರ ಅಧಿಸೂಚನೆ ಹೊರಡಿಸಿದೆ.
ಬಂಗಾಳ ಸರ್ಕಾರದ ನಡೆಯನ್ನು ವಿರೋಧ ಪಕ್ಷ ಬಿಜೆಪಿ ಸ್ವಾಗತಿಸಿದೆಯಾದರೂ ಸರ್ಕಾರದ ಕ್ರಮಕ್ಕೆ ಇದ್ಯಾವ ನಾಟಕ ಎಂದು ವ್ಯಂಗ್ಯ ಮಾಡಿದೆ. ಇನ್ನು ಈ ಬಗ್ಗೆ ಬಿಜೆಪಿ ನಾಯಕ ಅಮಿತ್ ಮಾಲವೀಯ ಪ್ರತಿಕ್ರಿಯೆ ನೀಡಿದ್ದು, ಬಂಗಾಳದಲ್ಲಿ ಕಾಲ ಬದಲಾಗುತ್ತಿದ್ದು, ಸರ್ಕಾರ ರಾಮನವಮಿಗೆ ರಜೆ ಘೋಷಿಸುವುದು ಅನಿವಾರ್ಯವಾಯಿತು. ಹಿಂದೂ ವಿರೋಧಿ ಹಣೆಪಟ್ಟಿ ತೊಡೆದುಹಾಕಲು ಸಿಎಂ ಮಮತಾ ಬ್ಯಾನರ್ಜಿ ಈ ಕ್ರಮ ತೆಗೆದುಕೊಂಡಿದ್ದಾರೆ. ಆದರೆ, ಜೈ ಶ್ರೀರಾಮ್ ಎಂದರೆ ಬೆಂಕಿಯಂತಾಗುವ ವ್ಯಕ್ತಿಯಿಂದ ಈ ನಡೆ ಬಹಳ ನಿಧಾನವಾಯಿತು ಎಂದು ಲೇವಡಿ ಮಾಡಿದ್ದಾರೆ.