ನವದೆಹಲಿ, ಮಾ 11 (DajiworldNews/AK): ಇಂದು ಮಿಷನ್ ದಿವ್ಯಾಸ್ತ್ರ ಯಶಸ್ವಿ ಉಡಾವಣೆಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.ಡಿಆರ್ಡಿಒ ವಿಜ್ಞಾನಿಗಳು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಅಗ್ನಿ-5 ಕ್ಷಿಪಣಿಯ ಮೊದಲ ಪರೀಕ್ಷಾರ್ಥ ಹಾರಾಟ ನಡೆಸಿದ್ದಾರೆ.
ಮಿಷನ್ ದಿವ್ಯಾಸ್ತ್ರ (Mission Divyastra) ಯಶಸ್ವಿ ಉಡಾವಣೆಯನ್ನು ನಡೆಸಿದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ವಿಜ್ಞಾನಿಗಳಿಗೆ ಪ್ರಧಾನಿ ನರೇಂದ್ರ ಮೋದಿ ವರು ತಮ್ಮ ಎಕ್ಸ್ ಖಾತೆಯಲ್ಲಿ ಅಭಿನಂದನೆ ಹೇಳಿದ್ದಾರೆ.
ಡಿಆರ್ಡಿಒ ವಿಜ್ಞಾನಿಗಳು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಅಗ್ನಿ-5 ಕ್ಷಿಪಣಿಯ ಮೊದಲ ಪರೀಕ್ಷಾರ್ಥ ಹಾರಾಟ ನಡೆಸಿದ್ದಾರೆ. ಈ ಕ್ಷಿಪಣಿ ಮಲ್ಟಿಪಲ್ ಇಂಡಿಪೆಂಡೆಂಟ್ಲಿ ಟಾರ್ಗೆಟೆಬಲ್ ರೀ-ಎಂಟ್ರಿ ವೆಹಿಕಲ್ (ಎಂಐಆರ್ವಿ) ತಂತ್ರಜ್ಞಾನವನ್ನು ಹೊಂದಿದೆ. ಇದು ನಮ್ಮ ಭಾರತಕ್ಕೆ ಹೆಮ್ಮೆಯ ಕ್ಷಣ ಎಂದು ಮೋದಿ ಹೇಳಿದ್ದಾರೆ.
ಕ್ಷಿಪಣಿ ಪಾಕಿಸ್ತಾನ ಮತ್ತು ಚೀನಾದಂತಹ ದೇಶಗಳಿಂದ ವಿವಿಧ ರಂಗದಲ್ಲಿ ಸವಾಲುಗಳನ್ನು ಎದುರಿಸುತ್ತಿರುವ ಭಾರತೀಯ ರಕ್ಷಣಾ ಪಡೆಗಳಿಗೆ ಉತ್ತೇಜನವಾಗಿದೆ.