ರಾಯಚೂರು, ಮಾ 14(DaijiworldNews/MS): ರಾಯಚೂರಿನ ಮಹಾತ್ಮಗಾಂದಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಸಮಾವೇಶ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆಗೆ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಭಾಗವಹಿಸಿದ್ದು ಅವರೊಂದಿಗೆ ಸಣ್ಣ ನೀರಾವರಿ, ವಿಜ್ಞಾನ ತಂತ್ರಜ್ಞಾನ ಇಲಾಖೆ ಸಚಿವರಾದ ಎನ್ಎಸ್ ಬೋಸರಾಜು ಅವರು ಭಾಗವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾಂಗ್ರೆಸ್ ಸರ್ಕಾರ ನೀಡಿದ ಗ್ಯಾರಂಟಿ ಯೋಜನೆಗಳ ಅನುಷ್ಠಾನ, ರಾಯಚೂರು ಜಿಲ್ಲೆಗೆ ಬಿಡುಗಡೆಗೊಳಿಸಿದ ಅನುದಾನದ ಕುರಿತು ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್ಎಸ್ ಬೋಸರಾಜು ಅವರು ಸವಿವರದೊಂದಿಗೆ ಮಾತನಾಡಿದರು. ಕೃಷ್ಣಾ ನದಿಯಿಂದ ಗಣೆಕಲ್ ಕೆರೆ ( ಬಂಗಾರಪ್ಪ ಕೆರೆ) ಗೆ ನೀಡುಣಿಸುವ ಅಪ್ರಾಳ ಏತ ನೀರಾವರಿ ಯೋಜನೆ 211 ಕೋಟಿ ರೂ ವೆಚ್ಚದಲ್ಲಿ ಪೂರ್ಣಗೊಳಿಸಿದ ಕಾಮಗಾರಿಯನ್ನು ಉದ್ಘಾಟಿಸಲಾಗಿದೆ. ಇದರಿಂದ ಗಣೇಕಲ್ ಕೆರೆ ಅವಲಂಬಿತ ಕೃಷಿ ಭೂಮಿಗೆ ನೀರಾಡಲಿದೆ, ರಾಯಚೂರು ನಗರಕ್ಕೆ 24*7 ಕುಡಿಯುವ ನೀರಿಗೆ ಸಹಕಾರಿಯಾಗಲಿದೆ ಎಂದರು.
ಜು.23 ರಂದು ಗೃಹ ಜ್ಯೋತಿ ಆರಂಭಿಸಲಾಗಿದೆ. ಜೂ.11ರಂದು ಶಕ್ತಿ ಚಾಲನೆ ನೀಡಿದ್ದು 324 ಕೋಟಿ ಬಾರಿ ಮಹಿಳೆಯರು ಪ್ರಯಾಣ ಮಾಡಿದ್ದಾರೆ. 118.20 ಕೋಟಿ ಪಾವತಿಯಾಗಿದೆ. 5 ಕೆಜಿ ಅನ್ನಭಾಗ್ಯ ಅಕ್ಕಿ ವಿತರಣೆ ಮಾಡಲಾಗುತ್ತಿದ್ದು, ಬಾಕಿ ಐದು ಕೆಜಿ ಅಕ್ಕಿ ಹಣವನ್ನು ಫಲಾನುಭವಿಗಳ ಖಾತೆಗೆ ಹಾಕಲಾಗುತ್ತಿದೆ. 34 ರೂ.ನಂತೆ 170 ರೂ. ಹಣವನ್ನು ನೀಡುತ್ತಿದ್ದು, ಈ ಯೋಜೆನೆಗೆ 141.13 ಕೋಟಿ ಸಂದಾಯವಾಗಿದೆ. ಗೃಹಲಕ್ಷ್ಮಿ ಯೋಜನೆಯಡಿ 22,54,870 ಫಲಾನುಭವಿಗಳು ನೊಂದಾಯಿಸಿದ್ದಾರೆ ಇಲ್ಲಿವರೆಗೂ 450 ಕೋಟಿ ಹಣ ನೀಡಲಾಗಿದೆ. ಯುವನಿಧಿಯಡಿ 1.34 ಕೋಟಿ ಹಣ ಪಾವತಿಯಾಗಿದೆ. 211.53 ಕೋಟಿ ವೆಚ್ಚದಲ್ಲಿ ಗಣೇಕಲ್ ಜಲಾಶಯ ಭರ್ತಿಗೆ ಕೃಷ್ಣಾ ನದಿಯಿಂದ ಅಪ್ರಾಳ ಏತ ನೀರಾವರಿ ಮೂಲಕ ನೀರು ಹರಿಸಲಾಗುತ್ತಿದೆ ಎಂದು ಇನ್ನು ಅನೇಕ ಯೋಜನೆಗಳ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಪ್ರಕಾಶ ಪಾಟೀಲ್, ಶಾಸಕ ಬಸನಗೌಡ ದದ್ದಲ್, ಹಂಪಯ್ಯ ನಾಯಕ್, ತುರ್ವಿಹಾಳ ಬಸನಗೌಡ, ಬಸವರಾಜ ಪಾಟೀಲ್ ಇಟಗಿ, ಮೊಹ್ಮದ್ ಶಾಲಂ, ಜಯಣ್ಣ, ಬಸವರಾಜ ರೆಡ್ಡಿ, ಕೆ ಶಾಂತಪ್ಪ, ರುದ್ರಪ್ಪ ಅಂಗಡಿ, ಕುರಬದೊಡ್ಡಿ ಆಂಜನೇಯ್ಯ, ನರಸಿಂಹಲು ಮಾಡಗಿರಿ ಸೇರಿದಂತೆ ಅನೇಕರು ಇದ್ದರು