ದಾವಣಗೆರೆ, ಮಾ 15(DaijiworldNews/AK):ಟಿಕೆಟ್ ಕೊಟ್ಟ ಮೇಲೆ ಎಲ್ಲ ಕಡೆ ಗೊಂದಲಗಳು ಇದ್ದೇ ಇರುತ್ತವೆ. ಒಂದು ವಾರ ಕಳೆದ ಬಳಿಕ ಎಲ್ಲವೂ ಸರಿಯಾಗುತ್ತವೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿ.ಎಂ . ಸಿದ್ದೇ ಶ್ವರ ಅವರ ಪತ್ನಿಗೆ ಟಿಕೆಟ್ ನೀಡಿದ್ದು ಹೈಕಮಾಂಡ್. ಏನೇ ಗೊಂದಲ ಇದ್ದರೂ ಅದನ್ನು ಪರಿಹರಿಸಲಾಗುವುದು. ಯಾರು ಕೂಡ ರೆಬಲ್ ಆಗಿ ನಿಲ್ಲುವ ಪರಿಸ್ಥಿತಿ ಇಲ್ಲಿ ಇಲ್ಲ ಎಂ ದು ಹೇ ಳಿದರು.
ಮಾಜಿ ಸಚಿವರಾದ ಎಂ .ಪಿ. ರೇ ಣುಕಾಚಾರ್ಯ , ಎಸ್.ಎ. ರವೀಂ ದ್ರನಾಥ್ ಅವರೊಂದಿಗೆ ಮಾತನಾಡುತ್ತೇನೆ. ರೇಣುಕಾಚಾರ್ಯ ಸಿದ್ದೇಶ್ವರ ಅವರ ಶಿಷ್ಯ, ಕಳೆದ ಚುನಾವಣೆಯ ಗೊಂದಲದಿಂದ ಹೀಗೆ ಆಗಿದೆ ಎಂದರು.
ಕೆ.ಎಸ್. ಈಶ್ವರಪ್ಪ ಮಗನಿಗೆ ಟಿಕೆಟ್ ಸಿಕ್ಕಿಲ್ಲ ಎಂದು ಮಾತನಾಡಿರಬಹುದು. ಕೇಂದ್ರ ನಾಯಕರು ಈಗಾಗಲೇ ಈಶ್ವರಪ್ಪ ಅವರನ್ನು ಸಂಪರ್ಕಿಸಿದ್ದಾರೆ. ಚುನಾವಣೆಗೆ ಯಾವುದೇ ತೊಂದರೆಯಾಗುವುದಿಲ್ಲ.ದೇಶದಲ್ಲಿ 400ಕ್ಕೂ ಹೆಚ್ವು ಸೀಟ್ ಗೆಲ್ಲಲು ಹೊರಟಿದ್ದೇವೆ. ಎಲ್ಲವನ್ನೂ ಸರಿಪಡಿಸಿಕೊಂಡು ಮೋ ದಿ ಅವರನ್ನು ಪ್ರಧಾನಿ ಮಾಡುವುದು ನಮ್ಮ ಗುರಿ ಎಂದು ಹೇಳಿದರು.ಜಗದೀಶ್ ಶೆಟ್ಟರ್ ಬೆಳಗಾವಿಯಿಂ ದಲೇ ಸ್ಪರ್ಧೆ ಮಾಡುವ ಸಾಧ್ಯತೆ ಇದೆ ಎಂ ದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
‘