ನವದೆಹಲಿ, ಮಾ 16(DaijiworldNews/ AK: ಲೋಕಸಭಾ ಚುನಾವಣೆ ಕರ್ನಾಟಕದಲ್ಲಿ ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಏಪ್ರೀಲ್ 26 ಮೊದಲನೇ ಹಂತ, ಮೇ. 7 ರಂದು ಎರಡನೇ ಹಂತ ಮತದಾನ ನಡೆಯಲಿದೆ. ಜೂನ್ 4 ಕ್ಕೆ ಮತಎಣಿಕೆ ನಡೆಯಲಿದೆ ಎಂದು ಭಾರತೀಯ ಚುನಾವಣಾ ಆಯೋಗ ಘೋಷಿಸಿದೆ.
ದೆಹಲಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್, 543 ಲೋಕಸಭಾ ಕ್ಷೇತ್ರದಲ್ಲಿ 7ಹಂತದಲ್ಲಿ ಮತದಾನ ನಡೆಯಲಿದೆ.
ಏಪ್ರೀಲ್ 16 ರಂದು ಮೊದಲ ಹಂತದ ಮತದಾನ , ಏಪ್ರೀಲ್ 26 ರಂದು ಎರಡನೇ ಹಂತ ಮತದಾನ , ಮೇ 7 ಮೂರನೇ ಹಂತದಲ್ಲಿ ಮತದಾನ. ನಾಲ್ಕನೇ ಹಂತ ಮೇ 13, 5 ನೇ ಹಂತದ ಮೇ 20, ಮೇ 25 ರಂದು 6ನೇ ಹಂತದ ಮತದಾನ, ಜೂನ್1 ರಂದು 7ನೇ ಹಂತದ ಮತದಾನ ನಡಯಲಿದೆ. ಜೂನ್ 4ಕ್ಕೆ ಮತ ಎಣಿಕೆ ನಡೆಯಲಿದೆ ಎಂದರು.
ಆಂಧ್ರದಲ್ಲಿ ಮೇ 13ಕ್ಕೆ ಚುನಾವಣೆ, ಅರುಣಾಚಲಪ್ರದೇಶ ಏಪ್ರಿಲ್ 19 ಚುನಾವಣೆ, ಸಿಕ್ಕಿಂ ಏಪ್ರಿಲ್ 19 ಚುನಾವಣೆ, ಒಡಿಶಾ ಮೇ 13 ಹಾಗೂ ಮೇ 20 ನಡೆಯಲಿದೆ.
1.8 ಕೋ ಟಿ ಮತದಾರರು ಮೊದಲ ಬಾರಿಗೆ ಮತ ಚಲಾಯಿಸಲಿದ್ದಾರೆ. 10.05 ಲಕ್ಷ ಮತಗಟ್ಟೆಗಳನ್ನು ಸಿದ್ಧಪಡಿಸಲಾಗುವುದು. ದೇ ಶದಲ್ಲಿ ಸುಮಾರು 97 ಕೋಟಿ ಮತದಾರರು ಇದ್ದಾರೆ 1.5 ಕೋ ಟಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಈ ಚುನಾವಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಕರ್ನಾಟಕದ 14 ಕ್ಷೇತ್ರಗಳಲ್ಲಿ ಮೊದಲ ಹಂತದಲ್ಲಿ ಮತದಾನ (ಏಪ್ರಿಲ್ 26). ಉಳಿದ 14 ಕ್ಷೇತ್ರಗಳಿಗೆ ಮೇ 7ರಂದು ಮತದಾನ ನಡೆಯಲಿದೆ.