ನವದೆಹಲಿ, 17(DaijiworldNews/AK):ಇತ್ತೀಚೆಗೆ ಸುಪ್ರೀಂ ಕೋ ರ್ಟ್ ಗೆ ಸಲ್ಲಿಸಲಾಗಿದ್ದ ಚುನಾವಣಾ ಬಾಂಡ್ಗಳ ಕುರಿತಾದ ಹೊಸ ಮಾಹಿತಿಯನ್ನು ಚುನಾವಣಾ ಆಯೋಗ ಪ್ರಕಟಿಸಿದೆ.
ಈ ಅಂಕಿ ಅಂಶವು 2019ರ ಏಪ್ರಿಲ್ 12ಕ್ಕೂ ಹಿಂದಿನದ್ದು ಎಂದು ಹೇಳಲಾಗಿದೆ. ಈ ದಿನಾಂಕದ ನಂತರದ ಅಂಕಿ ಅಂಶವನ್ನು ಕಳೆದ ವಾರವೇ ಚುನಾವಣಾ ಆಯೋಗ ಬಹಿರಂಗಪಡಿಸಿತ್ತು.
ಈ ಹೊಸ ಅಂಕಿ ಅಂಶಗಳ ಪ್ರಕಾರ, ಕೇಂದ್ರದ ಆಡಳಿತಾರೂಢ ಬಿಜೆಪಿ, ಚುನಾವಣಾ ಬಾಂಡ್ಗಳ ಮೂಲಕ 6,986.5 ಕೋಟಿ ರೂ. ಪಡೆದುಕೊಂಡಿದೆ.2019–20ರ ಅವಧಿಯಲ್ಲಿ ಅತ್ಯಧಿಕ 2,555 ಕೋಟಿ ರೂ. ಪಡೆದುಕೊಂಡಿದೆ ಎಂದು ಚುನಾವಣಾ ಅಯೋಗದ ಅಂಕಿ ಅಂಶದಿಂದ ತಿಳಿದುಬಂದಿದೆ.
ತೃಣಮೂಲ ಕಾಂಗ್ರೆಸ್ ಪಕ್ಷವು 2ನೇ ಸ್ಥಾನದಲ್ಲಿದ್ದು, ಚುನಾವಣಾ ಬಾಂ ಡ್ ಮೂಲಕ 1,397 ಕೋಟಿ ರೂ. ಪಡೆದುಕೊಂಡಿದೆ. ಕಾಂ ಗ್ರೆಸ್ 1,334.35 ಕೋಟಿ ಪಡೆದಿದೆ.
ಡಿಎಂಕೆ ಪಕ್ಷ 656.5 ಕೋಟಿ ರೂ. ಪಡೆದುಕೊಂಡಿದ್ದರೆ, ಅದರಲ್ಲಿ ಲಾಟರಿ ಕಿಂಗ್ ಸ್ಯಾಂಟಿ ಯಾಗೊಮಾರ್ಟಿ ನ್ಸ್ ಫ್ಯೂಚರ್ ಗೇಮಿಂಗ್ನಿಂದಲೇ 509 ಕೋಟಿ ಚುನಾವಣಾ ಬಾಂಡ್ ಪಡೆದುಕೊಂಡಿದೆ.ಬಿಜೆಡಿಗೆ 944.5 ಕೋಟಿ ರೂ. ವೈಎಸ್ಆರ್ ಕಾಂಗ್ರೆಸ್ಗೆ 442.8 ಕೋಟಿ ರೂ. ಟಿಡಿಪಿಗೆ 181.35 ಕೋಟಿ ರೂ ಬಂದಿದೆ.
ಸುಪ್ರೀಂ ಕೋ ರ್ಟ್ ಆದೇಶದ ಅನ್ವಯ ರಾಜಕೀಯ ಪಕ್ಷಗಳು ಮುಚ್ಚಿದ ಲಕೋ ಟೆಯಲ್ಲಿ ಅಂಕಿ ಅಂಶ ಸಲ್ಲಿಸಿವೆ ಎಂ ದು ಆಯೋ ಗ ತಿಳಿಸಿದೆ.