ಬೆಂಗಳೂರು, 17(DaijiworldNews/ AK): ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದಗೌಡ ಅವರಿಗೆ ಬೆಂಗಳೂರು ಉತ್ತರ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ತಪ್ಪಿದೆ. ಪಕ್ಷದ ನಿರ್ಧಾರದಿಂದ ಡಿವಿ ಸದಾನಂದಗೌಡ ಅವರು ಬೇಸರಗೊಂಡಿದ್ದಾರೆ.
ಹೀಗಾಗಿ ಕಾಂಗ್ರೆಸ್ ಮುಖಂಡರು ಡಿವಿ ಸದಾನಂದಗೌಡ ಅವರನ್ನು ಸಂಪರ್ಕಿಸುತ್ತಿದ್ದು, ಟಿಕೆಟ್ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.ಈ ಬೆನ್ನಲ್ಲೇ ಬೆಂಗಳೂರಿನಲ್ಲಿ ರಾಜಕೀಯ ಬೆಳವಣಿಗೆಗಳ ಕುರಿತು ಮಾತನಾಡಿದ ಡಿವಿ ಸದಾನಂದ ಗೌಡ ಅವರು, ಸುತ್ತಮುತ್ತಲೂ ಅನೇಕ ಸಂಗತಿಗಳು ನಡೆಯುತ್ತಿರುವುದು ನಿಜ.
ಪಕ್ಷದ ವರಿಷ್ಠರು ನನ್ನೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಹಲವು ವಿಷಯಗಳು ನಡೆಯುತ್ತಿವೆ, ಇಂದು ನನ್ನ ಹುಟ್ಟುಹಬ್ಬದ ದಿನ ನಾನು ನನ್ನ ಕುಟುಂಬ ಸದಸ್ಯರೊಂದಿಗೆ ದಿನ ಕಳೆಯುತ್ತೇನೆ. ಮುಂದಿನ ಬಗ್ಗೆ ನಂತರ ನಾನು ನಿರ್ಧರಿಸಿ ಮಾಧ್ಯಮದ ಮುಂದೆ ಬಂದು ಚರ್ಚಿಸುತ್ತೇನೆ.ನಾನು ನನ್ನ ಕುಟುಂಬದೊಂದಿಗೆ ಚರ್ಚಿಸಿ ನನ್ನ ನಿರ್ಧಾರವನ್ನು ಬಹಿರಂಗಪಡಿಸಬೇಕು. ಎಂದರು.
ದೆಹಲಿ ಮತ್ತು ಇಲ್ಲಿಯೂ ಅನೇಕ ಬೆಳವಣಿಗೆಗಳು ನಡೆದಿವೆ, ನಾನು ಸ್ಪರ್ಧಿಸಲು ಸಿದ್ಧನಿಲ್ಲ, ಆದರೆ ನನ್ನನ್ನು ಕರೆತರಲಾಯಿತು. ಸ್ಪರ್ಧಿಸಿ ಕೊನೆ ಕ್ಷಣದಲ್ಲಿ ನನ್ನನ್ನು ನಿರಾಕರಿಸಲಾಯಿತು. ತಮ್ಮ ಸ್ವಾರ್ಥದ ಲಾಭಕ್ಕಾಗಿ ಯಾರಾದರೂ ನೋವುಂಟು ಮಾಡಿದಾಗ ಅದು ನೋವಾಗತ್ತದೆ. ಭಿನ್ನಾಭಿಪ್ರಾಯವಿರುವ ಪಕ್ಷದ ಬಗ್ಗೆ ಹೇಳಲು ಏನೂ ಉಳಿದಿಲ್ಲ ಎಂದು ಹೇಳಿದರು.