ಬೆಂಗಳೂರು, ಮಾ 19(DaijiworldNews/MS): ಒಂದೆಡೆ ಬಿಜೆಪಿಯಲ್ಲಿ ಅಸಮಾಧಾನಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಇನ್ನೊಂದೆಡೆ ಬಿಜೆಪಿ ಅಸಮಾಧಾನಿತ ನಾಯಕರ ಕಾಂಗ್ರೆಸ್ ಗೇಟ್ ಬಂದ್ ಆಗೋ ಲಕ್ಷಣ ಕಾಣಿಸುತ್ತಿದೆ. ಲೋಕಸಭಾ ಚುನಾವಣಾ ಹೊಸ್ತಿಲಲ್ಲಿ ಬಿಜೆಪಿಯ ನಾಯಕರು ಕಾಂಗ್ರೆಸ್ ಗೆ ಪಕ್ಷಾಂತರ ಮಾಡಲಿರುವ ಸೂಚನೆ ಸಿಕ್ಕಿದ ಬೆನ್ನಲ್ಲೇ ಇದಕ್ಕೆ ಸಿಎಂ ಸಿದ್ದರಾಮಯ್ಯ ಇದಕ್ಕೆ ಅಡ್ದಗಾಲು ಹಾಕಿದ್ದಾರೆ ಎನ್ನಲಾಗಿದೆ.
ಬಿಜೆಪಿಯ ಮಾಜಿ ಮುಖ್ಯಮಂತ್ರಿಯನ್ನು ಕಾಂಗ್ರೆಸ್ ಸೇರಿಸುವ ಪ್ರಯತ್ನದ ಭಾಗವಾಗಿ ಆಪರೇಷನ್ ಕಾಂಗ್ರೆಸ್ಗೆ ಒಪ್ಪದ ಸಿಎಂ, ಖಡಕ್ ಮಾತಿನಲ್ಲಿ ಆಗಲ್ಲ ಎಂದು ಕಡ್ಡಿಮುರಿದಂತೆ ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಬಿಜೆಪಿಯ ನಾಯಕರು ಚುನಾವಣೆ ವೇಳೆ ಕಾಂಗ್ರೆಸ್ ಸೇರಿ ಟಿಕೆಟ್ ಪಡೆಯುವುದು ಬೇಡ. ಜಗದೀಶ್ ಶೆಟ್ಟರ್ ಪ್ರಕರಣದಲ್ಲಿ ನಾವು ಪಾಠ ಕಲಿತ್ತಿದ್ದೇವೆ. ಸೋತರೂ, ಗೆದ್ದರೂ ನಮ್ಮ ಪಕ್ಷದವರೇ ಆಗಿದ್ದರೆ ಉತ್ತಮ. ಈ ಹಿಂದೆ ಮಾಡಿದ ತಪ್ಪು ಪುನರಾವರ್ತನೆ ಆಗಬಾರದು. ಒಂದು ವೇಳೆ ಬರುವುದಿದ್ದರೆ ಚುನಾವಣೆ ನಂತರ ಕಾಂಗ್ರೆಸ್ಗೆ ಸೇರ್ಪಡೆ ಆಗಲಿ. ಆಗ ಬೇಕಿದ್ದರೆ ಅವರಿಗೆ ಏನಾದರೂ ವ್ಯವಸ್ಥೆ ಮಾಡೋಣಾ ಎಂದು ಹೇಳಿ ಆಪರೇಷನ್ ಕಾಂಗ್ರೆಸ್ಗೆ ಬ್ರೇಕ್ ಹಾಕಿದ್ದಾರೆ.