ನವದೆಹಲಿ,ಏ30(DaijiworldNews/AZM) : ಪತ್ನಿ ಸುನಂದಾ ಪುಷ್ಕರ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿರುವ ಕಾಂಗ್ರೆಸ್ ನಾಯಕ ಶಶಿ ತರೂರ್ ವಿದೇಶಯಾನಕ್ಕೆ ದೆಹಲಿ ಕೋರ್ಟ್ ಇಂದು ಅನುಮತಿ ನೀಡಿದೆ. ಶಶಿ ತರೂರ್ ಅವರಿಗೆ ಮೇ ಐದರಿಂದ ಇಪ್ಪತ್ತನೇ ತಾರೀಕಿನವರೆಗೆ ಅಮೇರಿಕಕ್ಕೆ ತೆರಳಲು ವಿಶೇಷ ನ್ಯಾಯಾಧೀಶ ಅರುಣ್ ಭಾರದ್ವಾಜ್ ಅನುಮತಿ ನೀಡಿದ್ದಾರೆ.
ಅಮೆರಿಕದಲ್ಲಿ ನಡೆಯಲಿರುವ ಪತ್ರಿಕಾಗೋಷ್ಠಿಯಲ್ಲಿ ಭಾಗಿ ಆಗಬೇಕಿದೆ ಎಂದು ತಮ್ಮ ಅರ್ಜಿಯಲ್ಲಿ ತಿಳಿಸಿದ ಹಿನ್ನಲೆ ಅನುಮತಿ ನೀಡಲಾಗಿದೆ.
ಶಶಿ ತರೂರ್ ಅವರಿಗೆ ಜಾಮೀನು ನೀಡುವ ವೇಳೆ, ಅನುಮತಿ ಇಲ್ಲದೆ ವಿದೇಶಕ್ಕೆ ತೆರಳಬಾರದು ಎಂದು ಕೋರ್ಟ್ ನಿರ್ದೇಶನ ನೀಡಿತ್ತು. ಕೇಂದ್ರದ ಮಾಜಿ ಸಚಿವ ಶಶಿ ತರೂರ್ ವಿರುದ್ಧ ಐಪಿಸಿ ಸೆಕ್ಷನ್ 498-ಎ ಹಾಗೂ 306 ಅಡಿ ದೂರು ದಾಖಲಾಗಿದೆ.
2014ರ ಜನವರಿ 17ನೇ ತಾರೀಕು ರಾತ್ರಿ ದೆಹಲಿಯ ವಿಲಾಸಿ ಹೋಟೆಲ್ ನ ಕೋಣೆಯಲ್ಲಿ ಸುನಂದಾ ಪುಷ್ಕರ್ ಅವರು ಶವವಾಗಿ ಪತ್ತೆಯಾಗಿದ್ದರು. ಆ ಸಂದರ್ಭದಲ್ಲಿ ಶಶಿ ತರೂರ್ ಅವರ ಅಧಿಕೃತ ಬಂಗಲೆ ನವೀಕರಣ ಆಗುತ್ತಿದ್ದರಿಂದ ಈ ದಂಪತಿ ಹೋಟೆಲ್ ನಲ್ಲಿ ಉಳಿದುಕೊಂಡಿದ್ದರು.