ಹೊಸದಿಲ್ಲಿ,ಏ30(DaijiworldNews/AZM): ಅತ್ಯಾಚಾರ ಪ್ರಕರಣದ ಆರೋಪಿಯಾಗಿರುವ ಆಸಾರಾಂ ಪುತ್ರ ನಾರಾಯಣ ಸಾಯಿಗೆ ಗುಜರಾತ್ನ ಸೂರತ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ಹೊರಡಿಸಿದೆ.
2013ರಲ್ಲಿ ಸೂರತ್ ಮೂಲದ ಮಹಿಳೆಯನ್ನು ಅತ್ಯಾಚಾರಗೈದ ಆರೋಪದಲ್ಲಿ ನಾರಾಯಣ ಸಾಯಿಯನ್ನು ಬಂಧಿಸಲಾಗಿತ್ತು. ಮಹಿಳೆ ಆಸಾರಾಂ ಶಿಷ್ಯೆಯಾಗಿದ್ದು, ಆಶ್ರಮದಲ್ಲಿ ನೆಲೆಸಿದ್ದಾಗ ನಾರಾಯಣ ಸಾಯಿ ತನ್ನ ಮೇಲೆ ನಿರಂತರ ಅತ್ಯಾಚಾರ ನಡೆಸಿದ್ದಾಗಿ ಮಹಿಳೆ ಆರೋಪಿಸಿದ್ದರು. ಈ ಹಿನ್ನಲೆ ಪೊಲೀಸರು ಸಾಯಿಯನ್ನು ಹರ್ಯಾಣದ ಪಿಪ್ಲಿಯಿಂದ ಸಾಯಿಯನ್ನು ಬಂಧಿಸಿದ್ದರು.
2013ರ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜೋಧ್ಪುರ ನ್ಯಾಯಾಲಯ ಆಸಾರಾಂ ಮತ್ತು ಆತನ ಇಬ್ಬರು ಸಹಚರರು ಅಪರಾಧಿಗಳು ಎಂದು ತೀರ್ಪು ನೀಡಿದೆ. ಸದ್ಯ ಆಸಾರಾಂ ಜೋಧ್ಪುರ ಕೇಂದ್ರ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ.