ಬೆಂಗಳೂರು, ಮಾ 25(DaijiworldNews/AK): ಬರ ಪರಿಹಾರಕ್ಕಾಗಿ ರಾಜ್ಯ ಸರಕಾರ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿರುವುದು ರಾಜಕೀಯ ಪ್ರೇರಿತ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹೇಳಿದ್ದಾರೆ.
ಜೆಡಿಎಸ್ನ ಪ್ರಧಾನ ಕಚೇರಿ ಜೆ.ಪಿ.ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅವರು, ಕೇಂದ್ರದಿಂದ ಹಣ ಬಂದಿಲ್ಲ ಎಂದು ರಿಟ್ ಪಿಟಿಷನ್ ಹಾಕಿರುವುದು ಇದೇ ಮೊದಲು. ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಸಿದ್ದರಾಮಯ್ಯ ಆಗ ನಾವು ಊರೂರಿಗೆ ಗೋಶಾಲೆ ಮಾಡಿದ್ದೆವು . ಕೇಂದ್ರ ಸರಕಾರವನ್ನು ಬೇಡುತ್ತ ಕೂರಲಿಲ್ಲ. ರಿಟ್ ಹಾಕಿರುವುದು ರಾಜಕೀಯ ಪ್ರೇರಿತ. ಇದಕ್ಕಿಂತ ಬೇರೇನೂ ಹೇಳುವುದಿಲ್ಲ ಎಂದರು.
ಇದೇ ವೇಳೆ ಮೈತ್ರಿ ಕುರಿತು ಮಾತನಾಡಿದ ಅವರು, ಬಿಜೆಪಿ ಜತೆ ಮೈತ್ರಿಯಲ್ಲಿ ನಮ್ಮದೇನೂ ಸಮಸ್ಯೆ ಇಲ್ಲ. ನಮಗೆ ಮೂರು ಸೀಟು ಕೊಟ್ಟಿದ್ದಾರೆ. ನನ್ನನ್ನು, ಕುಮಾರಸ್ವಾಮಿಯವರನ್ನು, ಜಿ.ಟಿ. ದೇವೇಗೌಡರನ್ನು ತಾರಾ ಪ್ರಚಾರಕರನ್ನಾಗಿ ಮಾಡಿದ್ದಾರೆ. ಅಳಿಯ ಮಂಜುನಾಥ್ ಅವರಿಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ
ಎಂದು ಹೇಳಿದರು.