ಮುಂಬೈ, ಮಾ 30(DaijiworldNews/AA): ಮುಂಬರುವ ಲೋಕಸಭಾ ಚುನಾವಣೆಗೆ ಎನ್ಸಿಪಿ, ಶರದ್ ಚಂದ್ರ ಪವಾರ್ ಬಣ 5 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಬಾರಮತಿ ಕ್ಷೇತ್ರದಿಂದ ಸುಪ್ರಿಯಾ ಸುಳೆ, ಶಿರೂರು ಕ್ಷೇತ್ರದಿಂದ ಅಮೋಲ್ ಕೊಲ್ಹೆ ಅವರಿಗೆ ಎನ್ಸಿಪಿ ಮತ್ತೊಮ್ಮೆ ಅವಕಾಶ ನೀಡಿದೆ. ಜೊತೆಗೆ ನಾಸಿಕ್ ನ ದಿಂಡೋರಿ ಮೀಸಲು ಕ್ಷೇತ್ರದಿಂದ ಭಾಸ್ಕರ್ ಭಾಗ್ರೆ, ವಾರ್ಧಾ ಕ್ಷೇತ್ರದಿಂದ ಕಾಂಗ್ರೆಸ್ ಮಾಜಿ ಶಾಸಕ ಅಮರ್ ಕಾಳೆ ಅವರಿಗೆ ಟಿಕೆಟ್ ನೀಡಿದೆ.
ಇತ್ತೀಚೆಗೆ ಎನ್ಸಿಪಿ ಅಜಿತ್ ಪವಾರ್ ಬಣ ತೊರೆದು ಶರದ್ ಪವಾರ್ ಬಣವನ್ನು ಹಾಲಿ ಶಾಸಕ ನಿಲೇಶ್ ಲಂಕೆ ಅವರು ಸೇರಿಕೊಂಡಿದ್ದರು. ಇದೀಗ ಹಾಲಿ ಶಾಸಕ ನಿಲೇಶ್ ಲಂಕೆ ಅವರನ್ನು ಎನ್ಸಿಪಿ ಅಹ್ಮದ್ ನಗರ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ.