ಬೆಂಗಳೂರು, ಏ 04(DaijiworldNews/AA): ಮೊದಲನೇ ಹಂತದ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನವಾಗಿದ್ದು ಬುಧವಾರ ಹಲವು ಕ್ಷೇತ್ರಗಳ ಅಭ್ಯರ್ತಿಗಳು ನಾಮಪತ್ರ ಸಲ್ಲಿಸಿದರು. ರಾಜ್ಯದಲ್ಲಿ ಬುಧವಾರ ಒಂದೇ ದಿನ 116 ಉಮೇದುವಾರಿಕೆ ಸಲ್ಲಿಸಲಾಗಿದೆ. ಬುಧವಾರ ಒಂದೇ ದಿನ 108 ಪುರುಷರು ಮತ್ತು ಎಂಟು ಮಹಿಳೆಯರು ಸಹಿತ ಒಟ್ಟು 116 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.
ಮಾರ್ಚ್ 28 ರಿಂದ ಈವರೆಗೆ ರಾಜ್ಯದಲ್ಲಿ ಒಟ್ಟು 268 ನಾಮಪತ್ರಗಳು ಸಲ್ಲಿಕೆಯಾಗಿವೆ. ಇದರಲ್ಲಿ 243 ಪುರುಷರು ಹಾಗೂ 25 ಮಹಿಳೆಯರಾಗಿದ್ದಾರೆ. ಇನ್ನು ಒಬ್ಬರು ಒಂದಕ್ಕಿಂತ ಹೆಚ್ಚು ನಾಮಪತ್ರಗಳನ್ನು ಸಲ್ಲಿಸಬಹುದಾಗಿದೆ. ಹೀಗಾಗಿ ಈಗಾಗಲೇ ನಾಮಪತ್ರ ಸಲ್ಲಿಸಿದವರಲ್ಲಿ 184 ಪುರುಷರು ಹಾಗೂ 15 ಮಹಿಳಾ ಅಭ್ಯರ್ಥಿಗಳಿದ್ದಾರೆ.
ಉಡುಪಿ - ಚಿಕ್ಕಮಗಳೂರು ಕ್ಷೇತ್ರದಲ್ಲಿ 7, ದಕ್ಷಿಣ ಕನ್ನಡ ಕ್ಷೇತ್ರದಲ್ಲಿ 4 ನಾಮಪತ್ರ ಸಲ್ಲಿಕೆಯಾಗಿವೆ. ನಾಮಪತ್ರ ಸಲ್ಲಿಕೆ ಇಂದು ಕೊನೆ ದಿನವಾಗಿದ್ದು ಏ. 5 ಕ್ಕೆ ನಾಮಪತ್ರ ಗಳ ಪರಿಶೀಲನೆ ನಡೆಯಲಿದೆ. ಅಭ್ಯರ್ಥಿಗಳು ನಾಮಪತ್ರ ಹಿಂಪಡೆಯಲು ಏ. 8 ಕೊನೆ ದಿನವಾಗಿದೆ. ಏ. 26 ರಂದು ರಾಜ್ಯದ 14 ಲೋಕಸಭಾ ಕ್ಶೇತ್ರಗಳಲ್ಲಿ ಚುನಾವಣೆ ನಡೆಯಲಿದೆ.