ನವದೆಹಲಿ, ಏ 05 (DaijiworldNews/AK): ದೆಹಲಿ ಸಚಿವೆ, ಎಎಪಿ ನಾಯಕಿ ಆತಿಶಿ ಅವರಿಗೆ ಚುನಾವಣಾ ಆಯೋಗ ಶುಕ್ರವಾರ ಶೋಕಾಸ್ ನೋಟಿಸ್ ನೀಡಿದೆ. ಪಕ್ಷ ಸೇರಲು ಬಿಜೆಪಿ ತನ್ನನ್ನು ಆಪ್ತರ ಮೂಲಕ ಸಂಪರ್ಕಿಸಿದೆ ಎಂಬ ಅವರ ಹೇ ಳಿಕೆಗೆ ಪ್ರತಿಕ್ರಿಯೆ ನೀಡುವಂತೆ ಸೂಚನೆ ನೀಡಿದೆ.
ರಾಜಕೀಯ ಭವಿಷ್ಯ ಉಳಿಸಿಕೊಳ್ಳಲು ತಮ್ಮ ಪಕ್ಷ ಸೇರುವಂತೆ ನನ್ನ ಆಪ್ತ ಸಹಾಯಕರೊಬ್ಬರ ಮೂಲಕ ಬಿಜೆಪಿ ನನ್ನನ್ನು ಸಂಪರ್ಕಿಸಿದೆ. ಬಿಜೆಪಿಗೆ ಸೇರದೆ ಹೋದರೆ ಮುಂ ಬರುವ ದಿನಗಳಲ್ಲಿ ಜಾರಿ ನಿರ್ದೇಶನಾಲಯ ನನ್ನನ್ನು ಬಂಧಿಸುವ ಸಾಧ್ಯತೆಯಿದೆ ಎಂದು ಆತಿಶಿ ಆರೋಪಿಸಿದ್ದರು.
ಈ ಹೇಳಿಕೆಯ ಖಂಡಿಸಿ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ಇದೀಗ ಅತಿಶಿಗೆ ನೋಟಿಸ್ ನೀಡಿ ಸೋಮವಾರ ಮಧ್ಯಾಹ್ನದೊಳಗೆ ಪ್ರತಿಕ್ರಿಯೆ ನೀ ಡುವಂತೆ
ಆಯೋಗ ಸೂಚಿಸಿದೆ.
ನೀ ವು ದೆಹಲಿ ಸಚಿವರಾಗಿದ್ದೀರಿ. ಮತದಾರರು ತಮ್ಮ ನಾಯಕರು ಸಾರ್ವಜನಿಕ ವೇ ದಿಕೆಯಿಂ ದ ಏನು ಹೇ ಳಿದರೂ ನಂಬುತ್ತಾರೆ.ಯಾವುದೇ ನಾಯಕರು ನೀಡಿದ ಹೇ ಳಿಕೆಗಳು ಜನರ ಮೇ ಲೆ ಪರಿಣಾಮ ಬೀರುತ್ತವೆ ಎಂದು ಚುನಾವಣಾ ಆಯೋ ಗವು ನೀಡಿದ ನೋ ಟಿಸ್ ನಲ್ಲಿ ತಿಳಿಸಿದೆ.ಹೇಳಿಕೆಗಳು ಸಾಕ್ಷ್ಯ ವನ್ನು ಆಧರಿಸಿರಬೇಕು. ಅಲ್ಲದೇ ಹೇ ಳಿಕೆಗಳು ಸತ್ಯಾಸತ್ಯತೆಯ ಬಗ್ಗೆ ಸಂ ದೇ ಹ ಉದ್ಭವಿಸಿದಾಗ, ಅವುಗಳನ್ನು ದೃಢೀಕರಿಸಲು ಆಧಾರವನ್ನು ನೀಡಬೇಕಾಗುತ್ತದೆ ಎಂದು ಚುನಾವಣಾ ಆಯೋಗ ಹೇಳಿದೆ.