ಬೆಂಗಳೂರು, ಏ 07 (DaijiworldNews/AK): ಸುಡು ಬಿಸಿಲಿನಿಂದ ನೆತ್ತಿ ಸುಡುತ್ತಿದೆ. ಎಲ್ಲೆಡೆ ನೀರಿಲ್ಲದೆ ಜನ ಕಂಗೆಟ್ಟಿದ್ದಾರೆ. ಈ ಮಧ್ಯೆ ಬೆಂಗಳೂರಿಗರಿಗೆ ಈಗ ಕಾಲರಾ ದ ಭೀತಿ ಎದುರಾಗಿದೆ.
ಬೊಮ್ಮನಹಳ್ಳಿಯಲ್ಲಿ 3ನೇ ಪ್ರಕರಣ ಪತ್ತೆ, ರಾಜ್ಯದಲ್ಲಿ ಕಾಲರಾ ಕೇಸ್ಗಳ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಬೆಂಗಳೂರು ನಗರ ಒಂದರಲ್ಲೇ ಬರೋಬ್ಬರಿ 9 ಕೇಸ್ಗಳ ದೃಡಪಟ್ಟಿವೆ. ರಾಮನಗರದ ಓರ್ವ ವ್ಯಕ್ತಿಗೆ ಕಾಲರಾ ಚಿಕಿತ್ಸೆ ಕೊಡಿಲಾಗುತ್ತಿದೆ ಎನ್ನಲಾಗಿದೆ.
ನಿನ್ನೆ ಬೆಂಗಳೂರಿನ ಮೆಡಿಕಲ್ ಕಾಲೇಜಿನಲ್ಲಿ ಇಬ್ಬರು ವಿದ್ಯಾರ್ಥಿನಿಯರಿಗೆ ಕಾಲರಾ ದೃಡಪಟ್ಟಿತ್ತು. ಎಚ್ಚೆತ್ತುಕೊಂಡಿರುವ ಅಧಿಕಾರಿಗಳು BCM ಹಾಸ್ಟೆಲ್ನ ಆಹಾರ ಪದಾರ್ಥಗಳನ್ನು ಪರೀಕ್ಷೆಗೆ ಒಳಪಡಿಸಿದ್ದಾರೆ.