ನವದೆಹಲಿ, ಏ 09 (DaijiworldNews/AK): ಬಿಜೆಪಿ ಸಂಸದೆ ಹೇಮಾಮಾಲಿನಿ ವಿರುದ್ಧ ಅಸಭ್ಯ ಪದ ಬಳಸಿದ ಆರೋಪದಲ್ಲಿ ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲಗೆ ಚುನಾವಣಾ ಆಯೋ ಗ ಮಂಗಳವಾರ ನೋಟಿಸ್ ನೀಡಿದೆ. ಏ.11ರ ಸಂಜೆಯೊಳಗೆ ಉತ್ತರಿಸಬೇಕು ಎಂದು ಸೂಚನೆ ನೀಡಿದೆ.
ಇನ್ನು ಸಾರ್ವ ಜನಿಕ ಭಾಷಣದ ಸಮಯದಲ್ಲಿ ಮಹಿಳೆಯರ ಗೌರವ ಮತ್ತು ಘನತೆಯನ್ನು ಎತ್ತಿಹಿಡಿಯುವ ಬಗ್ಗೆ ತನ್ನ ಸಲಹೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲು ತೆಗೆದುಕೊಂಡ ಕ್ರಮಗಳ ಬಗ್ಗೆ ಪ್ರತಿಕ್ರಿಯೆ ನೀಡಿ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೂ ನೋಟಿಸ್ ನೀಡಿದೆ. ಏ.12ರ ಸಂಜೆಯೊಳಗೆ ಉತ್ತರಿಸಬೇಕು ಎಂದು ಖರ್ಗೆ ಅವರಿಗೂ ಸೂಚಿಸಿದೆ.
ನಟಿ, ಸಂಸದೆ ಹೇ ಮಮಾಲಿನ ವಿರುದ್ಧ ಸುರ್ಜೇ ವಾಲ ಹೇ ಳಿದ್ದಾರೆ ಎನ್ನಲಾದ ವಿಡಿಯೊವನ್ನು ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಎಕ್ಸ್ ಪೋಸ್ಟ್ ಮಾಡಿದ್ದರು. ಅಲ್ಲದೇ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ನೀಡಿತ್ತು.