ಜೈಪುರ, ಏ. 24(DaijiworldNews/AK): ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ದಲಿತ ಮೀಸಲಾತಿ ಮುಸ್ಲಿಮರ ಪಾಲಾಗಲಿದೆ ಎಂದು ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರವಿವಾರವಷ್ಟೇ ಹಿಂದೂಗಳ ಸಂಪತ್ತು ಮುಸ್ಲಿಮರ ಪಾಲಾಗಲಿದೆ ಎಂದಿದ್ದ ಅವರು, ಕಾಂಗ್ರೆಸ್ ಮೀಸಲಾತಿಯಲ್ಲೂ ಮೋಸ ಮಾಡಲು ಹೊರಟಿದೆ ಎಂದು ಸೋಮವಾರ ಕಿಡಿಕಾರಿದ್ದಾರೆ.
ರಾಜಸ್ಥಾನದ ಟೋಂಕ್ನಲ್ಲಿ ಮಂಗಳವಾರ ನಡೆದ ಚುನಾವಣ ರ್ಯಾಲಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಧರ್ಮಾಧರಿತವಾಗಿ ಮೀಸಲಾತಿಯನ್ನು ನೀಡುವುದಾಗಿ ಘೋಷಿಸಿದೆ. ಇದೊಂದು ಒಳಸಂಚಾಗಿದ್ದು , ದಲಿತರು, ಹಿಂದುಳಿದವರು ಮತ್ತು ಬುಡಕಟ್ಟು ಜನರ ಮೀಸಲಾತಿಯನ್ನು ಕಡಿಮೆ ಮಾಡಿ ಅದನ್ನು ಮುಸ್ಲಿಮರಿಗೆ ನೀಡಲಾಗುತ್ತದೆ ಎಂದು ಆರೋಪಿಸಿದ್ದಾರೆ.ಅದೇ ರೀತಿ ನಿಮ್ಮ ಸಂಪತ್ತನ್ನೂ ದೋಚಿ ನಿಗದಿತ ಸಮುದಾಯಕ್ಕೆ ನೀಡಲಾಗುತ್ತದೆ ಎಂದರು.