ಹೈದರ್ಬಾದ್, ಏ. 25(DaijiworldNews/AK): 22 ವರ್ಷಕ್ಕೆ ಮೊದಲ ಪ್ರಯತ್ನದಲ್ಲೇ ಯುಪಿಎಸ್ಸಿ ಪರೀಕ್ಷೆ ಪಾಸ್ ಮಾಡಿದ ಸ್ಮಿತಾ ಸಭರ್ವಾಲ್. ಭಾರತದ ಅತ್ಯಂತ ಕಿರಿಯ ಮಹಿಳಾ ಐಎಎಸ್ ಅಧಿಕಾರಿಯಾದ ಸ್ಮಿತಾ ಸಾಧನೆ ಯಶೋಗಾಥೆ ಇಲ್ಲಿದೆ.
ಯುಪಿಎಸ್ಸಿ ಪರೀಕ್ಷೆ ಬರೆದು, ದೊಡ್ಡ ಹುದ್ದೆ ಗಳಿಸಬೇಕು ಎಂಬ ಆಸೆ ಹಲವರಿಗೆ ಇರುವುದು ಸಹಜ. ಅಂತಹ ಅಸೆಯನ್ನು ಹೊತ್ತು ಮುನ್ನುಗ್ಗಿ ಮೊದಲ ಪ್ರಯತ್ನದಲ್ಲೇ ಯುಪಿಎಸ್ಸಿ ಪರೀಕ್ಷೆ ಪಾಸು ಮಾಡಿದ್ದಾರೆ ಸ್ಮಿತಾ ಸಭರ್ವಾಲ್. ಆ ಮೂಲಕ ಭಾರತದ ಮೊದಲ ಐಎಎಸ್ ಆಫೀಸರ್ ಎನ್ನಿಸಿಕೊಂಡಿದ್ದಾರೆ ಸ್ಮಿತಾ ಸಭರ್ವಾಲ್.
ಇವರು ಯುಪಿಎಸ್ಸಿ ಪರೀಕ್ಷೆ ಪಾಸ್ ಮಾಡಿದ್ದಾಗ 22 ವರ್ಷ. ಅವರು 2000 ಇಸವಿಯಲ್ಲಿ ಇವರು ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೆ. ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ನಲ್ಲಿ ಜನಿಸಿದ ಸ್ಮಿತಾ ನಿವೃತ್ತ ಸೇನಾ ಕರ್ನಲ್ ಒಬ್ಬರ ಮಗಳು.
ಸೇಂಟ್ ಆನ್ಸ್ನಲ್ಲಿ ಶಾಲಾ ಶಿಕ್ಷಣ ಮುಗಿಸಿದ ಸ್ಮಿತಾ, ಹೈದರಾಬಾದ್ನ ಸೇಂಟ್ ಫ್ರಾನ್ಸಿಸ್ ಕಾಲೇಜಿನಲ್ಲಿ ವಾಣಿಜ್ಯ ಪದವಿ ಪಡೆಯುತ್ತಾರೆ. ಐಎಎಸ್ ಅಧಿಕಾರಿಯಾಗಿರುವ ಸಬರ್ವಾಲ್ ಸಾಮಾಜಿಕ ಮಾಧ್ಯಮದಲ್ಲಿ ಬಹಳ ಜನಪ್ರಿಯರಾಗಿದ್ದಾರೆ.
ಐಎಎಸ್ ಅಧಿಕಾರಿಯಾಗಿರುವ ಸ್ಮಿತಾ ಸಭರ್ವಾಲ್ ಅವರು ಜನರ ಅಧಿಕಾರಿ ಎಂದೇ ಜನಪ್ರಿಯರಾಗಿದ್ದಾರೆ. ಜನರ ತೊಂದರೆ, ಕಷ್ಟಕ್ಕೆ ಸ್ಪಂದಿಸುವ ಮೂಲಕ ಮೆಚ್ಚುಗೆ ಗಳಿಸಿದ್ದಾರೆ. ವಾರಂಗಲ್, ವಿಶಾಖಪಟ್ಟಣಂ, ಕರೀಂನಗರ ಮತ್ತು ಚಿತ್ತೂರು ಸೇರಿದಂತೆ ತೆಲಂಗಾಣದ ಹಲವು ಕಡೆ ಇವರನ್ನು ನಿಯೋಜಿಸಲಾಗಿದೆ. ಸಿಎಂ ಕಚೇರಿಗೆ ನೇಮಕಗೊಂಡ ಅತ್ಯಂತ ಕಿರಿಯ ಅಧಿಕಾರಿ ಎಂಬ ಹೆಗ್ಗಳಿಕೆಗೂ ಇವರು ಪಾತ್ರರಾಗಿದ್ದಾರೆ.
ಅನೇಕರಿಗೆ ಯುಪಿಎಸ್ಸಿ ಪರೀಕ್ಷೆ ಬರೆಯಬೇಕು, ಐಎಎಸ್ ಅಧಿಕಾರಿಯಾಗಬೇಕು ಎಂಬ ಕನಸು ಇರುವುದು ಸಹಜ. ಅಂತಹ ಹಲವರಿಗೆ ಸ್ಫೂರ್ತಿ ಈ ಸ್ಮಿತಾ ಸಭರ್ವಾಲ್. ಎಳೆಯ ವಯಸ್ಸಿನಲ್ಲೂ ಸಾಧನೆ ಮಾಡಬಹುದು ಎಂಬುದನ್ನು ತೋರಿಸಿದ ಸ್ಮಿತಾ ಅವರ ಸಾಧನೆಗೊಂದು ಸೆಲ್ಯೂಟ್..