ಹುಬ್ಬಳ್ಳಿ, ಏ.25(DaijiworldNews/AA): ಹತ್ಯೆಗೀಡಾದ ನೇಹಾ ಹೀರೇಮಠ್ ಅವರ ಮನೆಗೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿದ್ದಾರೆ.
ಈ ವೇಳೆ ನೇಹಾ ತಂದೆ ಕಾಂಗ್ರೆಸ್ ಕಾರ್ಪೋರೇಟರ್ ನಿರಂಜನ್ ಹೀರೇಮಠ್ ಅವರು ಸಿಎಂ ಬಳಿ ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದಾರೆ. ಜೊತೆಗೆ ನಮ್ಮ ಕುಟುಂಬಕ್ಕೆ ಭದ್ರತೆ ಒದಗಿಸಬೇಕು. ವಿಶೇಷ ನ್ಯಾಯಲಯದಲ್ಲಿ 90ರಿಂದ 120 ದಿನದಲ್ಲಿ ನ್ಯಾಯ ದೊರಕಿಸಿ ಕೊಡಬೇಕು. ಸಾವಿಗೆ ಸಾವೇ ಶಿಕ್ಷೆಯಾಗಬೇಕು. ಆರೋಪಿಯನ್ನು ಗಲ್ಲಿಗೇರಿಸಿದ ಮೇಲೆಯೇ ನಮಗೆ ಸಮಾಧಾನ ಎಂದು ತಿಳಿಸಿದ್ದಾರೆ.
ಇನ್ನು ನೇಹಾ ತಂದೆ ನಿರಂಜನ ಅವರಿಗೆ ಧೈರ್ಯ ತುಂಬಿದ ಸಿಎಂ ಸಿದ್ದರಾಮಯ್ಯ, ಸಿಐಡಿ ಅಧಿಕಾರಿಗಳು ಪ್ರಕರಣದ ತನಿಖೆ ಮಾಡುತ್ತಿದ್ದಾರೆ. ವಿಶೇಷ ಕೋರ್ಟ್ ಗೆ ತನಿಖಾಧಿಕಾರಿಗಳು ಚಾರ್ಜ್ಸ ಶೀಟ್ ಸಲ್ಲಿಸ್ತಾರೆ. ಆದಷ್ಟು ಬೇಗ ನ್ಯಾಯಾಲಯದಲ್ಲಿ ಗರಿಷ್ಠ ಶಿಕ್ಷೆ ಆಗುತ್ತೆ. ಧೈರ್ಯವಾಗಿರಿ, 120 ದಿನದೊಳಗೆ ನ್ಯಾಯ ಕೊಡಿಸೋಣ ಎಂದಿದ್ದಾರೆ.