ಬೆಂಗಳೂರು, ಏ. 26(DaijiworldNews/AK): ರಾಜ್ಯದ ಮೊದಲ ಹಂತದ ಮತದಾನ ಮುಕ್ತಾಯಗೊಂಡಿದೆ. 14 ಕ್ಷೇತ್ರಗಳಿಗೆ ಶುಕ್ರವಾರ ಮತದಾನ ನಡೆದಿದ್ದು, ಜನ ಉತ್ಸಾಹದಿಂದಲೇ ಮತಚಲಾಯಿಸಿದ್ದಾರೆ. ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ನಡೆದ ಮತದಾನವು ಬಹುತೇಕ ಶಾಂತಿಯುತವಾಗಿ ನಡೆಯಿತು. ರಾಜ್ಯದಲ್ಲಿ ಶೇ.64.57ರಷ್ಟು ಮತದಾನ ಆಗಿದೆ. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚು ಶೇ.74.87ರಷ್ಟು ಮತದಾನ ಆಗಿದ್ದರೆ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಅತೀ ಕಡಿಮೆ ಶೇ.49.37ರಷ್ಟು ಮತದಾನವಾಗಿದೆ.
ಸಂಜೆ 6 ಗಂಟೆ ವೇಳೆಗೆ ಮತದಾನ ಪ್ರಕ್ರಿಯೆ ಮುಗಿಯುತ್ತಿದ್ದಂತೆ, ಬೂತ್ಗಳಲ್ಲಿ ಇವಿಎಂ ಯಂತ್ರಗಳ ಪವರ್ ಬಟನ್ ಆಫ್ ಮಾಡಿದ ಮತಗಟ್ಟೆ ಅಧಿಕಾರಿಗಳು ಅವುಗಳನ್ನು ಸ್ಟ್ರಾಂಕ್ ರೂಮಿನಲ್ಲಿರಿಸಲು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಮಂಡ್ಯ-ಶೇ.74.87, ಕೋಲಾರ-ಶೇ.73.25, ಉಡುಪಿ ಚಿಕ್ಕಮಗಳೂರು-ಶೇ.72.69, ದಕ್ಷಿಣ ಕನ್ನಡ-ಶೇ.72.30, ಹಾಸನ-ಶೇ.72.13, ತುಮಕೂರು-ಶೇ.72.10, ಚಿಕ್ಕಬಳ್ಳಾಪುರ-ಶೇ.71.85, ಚಾಮರಾಜನಗರ- ಶೇ.69.86, ಚಿತ್ರದುರ್ಗ-ಶೇ.67.52, ಮೈಸೂರು-ಶೇ.67.55, ಬೆಂಗಳೂರು ಗ್ರಾಮಾಂತರ-ಶೇ.61.78, ಬೆಂಗಳೂರು ಉತ್ತರ-ಶೇ.51.51, ಬೆಂಗಳೂರು ಕೇಂದ್ರ-ಶೇ.49.77 ಹಾಗೂ ಬೆಂಗಳೂರು ದಕ್ಷಿಣ-ಶೇ.49.37ರಷ್ಟು ಮತದಾನವಾಗಿದೆ.