ಬೆಂಗಳೂರು, ಏ. 30(DaijiworldNews/AK):ಹಾಸನದಲ್ಲಿನ ಪೆನ್ ಡ್ರೈವ್ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ.ಚಿಲ್ಲರೆ ರಾಜಕೀಯವನ್ನು ನಾನು ಮಾಡುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಪೆನ್ ಡ್ರೈವ್ ಪ್ರಕರಣದ ಹಿಂದೆ ಒಬ್ಬ ಮಹಾನಾಯಕ ಇದ್ದಾನೆ ಎಂಬ ಹೆಚ್.ಡಿ. ಕುಮಾರಸ್ವಾಮಿ ಅವರ ಆರೋಪದ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಇದೆ ಎಂ ದು ಹೆದರಿಸುವ ಕೆಲಸವನ್ನು ನಾನು ಮಾ ಡುವುದಿಲ್ಲ. ಚುನಾವಣೆಯಲ್ಲಿ ನೇರವಾಗಿ ಎದುರಿಸುತ್ತೇನೆ. ಏನೇ ವಿಷಯವಿದ್ದರೂ ವಿಧಾನಸಭೆಯೊಳಗೆ ಬಂದು ಮಾತನಾಡಿ ಎಂದು ಕುಮಾರಸ್ವಾಮಿ ಅವರಿಗೆ ಆಹ್ವಾನ ನೀಡಿದ್ದೇ ನೆ ಎಂದರು.
‘ಬಿಜೆಪಿಯವರು ಪೆನ್ಡ್ರೈ ವ್ ಬಿಡುಗಡೆ ಮಾಡಿದ್ದಾರೆ ಎಂದು ಪ್ರಜ್ವಲ್ ರೇವಣ್ಣ ಅವರ ಮಾಜಿ ಕಾರು ಚಾಲಕ ಹೇಳಿಕೆ ನೀಡಿದ್ದಾನೆ. ಸಾಮಾಜಿಕ ಮಾಧ್ಯಮಗಳಲ್ಲಿ ಬಂದ ವಿಡಿಯೊ ತುಣುಕುಗಳನ್ನು ನಮ್ಮ ಪಕ್ಷದ ಕಾರ್ಯಕರ್ತರು ಹಂಚಿಕೊಂ ಡಿರಬಹುದು. ಆದರೆ, ಪೆನ್ಡ್ರೈ ವ್ ಬಿಡುಗಡೆ ಹಿಂದೆ ನಾವಾಗಲೀ , ನಮ್ಮ ಪಕ್ಷವಾಗಲೀ ಇಲ್ಲ ಎಂದು ಹೇಳಿದರು.
ಬಹಿರಂಗಗೊಂಡಿರುವುದು ಹಳೆಯ ವಿಡಿಯೊಗಳು ಎಂದು ಎಚ್.ಡಿ. ರೇ ವಣ್ಣ ಅವರೇ ಒಪ್ಪಿಕೊಂಡಿದ್ದಾರೆ. ಇದೇ ವಿಚಾರವಾಗಿ ಬಿಜೆಪಿಮುಖಂಡ ದೇವರಾಜೇ ಗೌಡ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರವನ್ನೂ ಬರೆದಿದ್ದರು. ಪ್ರಜ್ವಲ್ ಟಿಕೆಟ್ ನೀ ಡದಂತೆ ಸೂಚಿಸಿದ್ದರು. ಇದನ್ನು ಕುಮಾರಸ್ವಾಮಿ ಅವರೇ ಹೇ ಳಿಕೊಂಡಿದ್ದರು ಎಂದರು.
ಪ್ರಜ್ವಲ್ ರೇವಣ್ಣ ಅವರನ್ನು ಜೆಡಿಎಸ್ ಪಕ್ಷದಿಂದ ವಜಾಗೊಳಿಸಲಿ ಅಥವಾ ಅಲ್ಲಿಯೇ ಇಟ್ಟುಕೊಳ್ಳಲಿ. ಅದು ಅವರಿಗೆ ಬಿಟ್ಟ ವಿಚಾರ. ಇದೆಲ್ಲವೂ ಕಣ್ಣೊರೆಸುವ ತಂತ್ರ ಎಂಬುದು ಎಲ್ಲರಿಗೂ ಗೊತ್ತು ಎಂದು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು.ಆದರೆ ಪ್ರಜ್ವಲ್ ರೇವಣ್ಣ ಪ್ರಕರಣದ ಕುರಿತು ಬಿಜೆಪಿಯವರು ಏಕೆ ಮೌನ ವಹಿಸಿದ್ದಾರೆ ಎಂದು ಶಿವಕುಮಾರ್ ಪ್ರಶ್ನಿಸಿದರು.