ಬೆಳಗಾವಿ, ಮೇ.1(DaijiworldNews/AA): ಲೋಕಸಭಾ ಚುನಾವಣೆಯಲ್ಲಿ ನಿಂತಿರೋದು ಲಕ್ಷ್ಮೀ ಹೆಬ್ಬಾಳ್ಕರ್ ಮಗ ಅಲ್ಲ ನಾನು ಎಂದುಕೊಂಡು ಮತ ಹಾಕಿ ಎಂದು ಸಿಎಂ ಸಿದ್ದರಾಮಯ್ಯ ಕೇಳಿಕೊಂಡಿದ್ದಾರೆ.
ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಾ ಅಥವಾ ಸುಳ್ಳು ಹೇಳಿಕೊಂಡು ತಿರುಗಾಡುತ್ತಿರುವ ಮೋದಿ ಸರ್ಕಾರ ಅಧಿಕಾರಕ್ಕೆ ಬರಬೇಕಾ ಎಂದು ನೀವೇ ನಿರ್ಧರಿಸಿ. ನೀವು ಕಾಂಗ್ರೆಸ್ ಅಭ್ಯರ್ಥಿಗೆ ಆಶೀರ್ವಾದ ಮಾಡಿದರೆ ನನಗೆ ಮಾಡಿದಂತಾಗುತ್ತದೆ. ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಅಲ್ಲ ನಾನು ನಿಂತಿದ್ದೇನೆ ಎಂದು ಮತ ನೀಡಿ ಎಂದರು.
ಇನ್ನು ಗ್ಯಾರಂಟಿಗಳನ್ನು ಜಾರಿ ಮಾಡಿದರೆ ಅಭಿವೃದ್ಧಿ ಕೆಲಸ ನಿಂತೋಗುತ್ತೆ, ಖಜಾನೆ ಖಾಲಿಯಾಗುತ್ತದೆ, ಲೋಕಸಭಾ ಚುನಾವಣೆಯ ನಂತರ ಎಲ್ಲಾ ಗ್ಯಾರಂಟಿಗಳು ನಿಂತು ಹೋಗುತ್ತದೆ ಎಂದು ಬಿಜೆಪಿ ಸುಳ್ಳು ಹೇಳಿಕೊಂಡು ಬರುತ್ತಿದೆ. ಆದರೆ ಕೊಟ್ಟ ಮಾತನ್ನು ತಪ್ಪಲು ನಾವು ಬಿಜೆಪಿಯವರಲ್ಲ. ಯಾವುದೇ ಕಾರಣಕ್ಕೂ ನೀಡಿರುವ ಭರವಸೆಯನ್ನು ಈಡೇರಿಸದೇ ಬಿಡುವುದಿಲ್ಲ. ನಮ್ಮ ಅವಧಿ ಮುಗಿಯುವವರೆ ಎಲ್ಲಾ ಗ್ಯಾರಂಟಿಗಳನ್ನು ಜಾರಿ ಮಾಡುತ್ತೇವೆ. ಕಾಂಗ್ರೆಸ್ ಅಭ್ಯರ್ಥಿ ಗೆದ್ದರೆ ನಮಗೆ ಇನ್ನಷ್ಟು ಶಕ್ತಿ ಬರುತ್ತದೆ ಎಂದಿದ್ದಾರೆ.