ನವದೆಹಲಿ,ಮೇ 06 (Daijiworld News/MSP): ಸಿಬಿಎಸ್ಇ 10ನೇ ತರಗತಿ ಫಲಿತಾಂಶ ಪ್ರಕಟವಾಗಿದ್ದು, 99.85% ಫಲಿತಾಂಶದೊಂದಿಗೆ ತ್ರಿವೇಂಡ್ರಂ ವಲಯ ಅಗ್ರ ಸ್ಥಾನ ಪಡೆದುಕೊಂಡಿದ್ದು ಒಟ್ಟಾರೆ 13 ವಿದ್ಯಾರ್ಥಿಗಳು 500ಕ್ಕೆ 499 ಅಂಕಗಳನ್ನು ಪಡೆದು ಟಾಪರ್ಗಳಾಗಿದ್ದಾರೆ.
ವಿಶೇಷ ಎಂದರೆ ಫಸ್ಟ್ ರ್ಯಾಂಕ್ ಪಡೆದ 13 ವಿದ್ಯಾರ್ಥಿಗಳಲ್ಲಿ 7 ವಿದ್ಯಾರ್ಥಿಗಳು ಡೆಹ್ರಾಡೂನ್ ವಲಯದವರಾಗಿದ್ದಾರೆ. ಈ ಬಾರಿ 18.19 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇದರಲ್ಲಿ 2.2 ಲಕ್ಷ (2,25,143 ) ವಿದ್ಯಾರ್ಥಿಗಳು ಶೇ.90ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದುಕೊಂಡಿದ್ದಾರೆ.
ಈ ಬಾರಿಯ ಒಟ್ಟಾರೆ ಒಟ್ಟಾರೆ ಫಲಿತಾಂಶ 86.7% ಆಗಿದ್ದು ಈ ಬಾರಿ 91.1% ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಫೆಬ್ರುವರಿ 21ರಿಂದ ಮಾರ್ಚ್ 29ರವರೆಗೆ ಸಿಬಿಎಸ್ಇ 10ನೇ ತರಗತಿ ಪರೀಕ್ಷೆ ನಡೆದಿತ್ತು.