ಸಿಂಧನೂರು, ಮೇ.3(DaijiworldNews/AK): ತನಿಖಾ ಸಂಸ್ಥೆಯನ್ನು ಸ್ಥಾಪನೆ ಮಾಡಿಕೊಂಡಿರುವ ಸರಕಾರ ಯಾವ ದಿಕ್ಕಿನಲ್ಲಿ ಹೊರಟಿದೆ. ಪ್ರಜ್ವಲ್ ರೇವಣ್ಣ
ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಮೊದಲು ರಾಹುಲ್ ಗಾಂಧಿಗೆ ನೋಟಿಸ್ ಕೊಟ್ಟು ವಿಚಾರಣೆ ನಡೆಸಬೇಕು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ 400 ಮಹಿಳೆಯರ ಮೇಲೆ ಅತ್ಯಾಚಾರ ಆಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಖರ್ಗೆ ಬದಲು ರಾಹುಲ್ ಗಾಂಧಿ ಮುಂದಿನ ಪ್ರಧಾನಿ ಎಂದು ಘೋಷಣೆ ಮಾಡಿರುವ ಸಿದ್ದರಾಮಯ್ಯ ಅವರೇ ಈ ಮಾಹಿತಿ ಕೊಟ್ಟಿರಬೇಕು. ಇಲ್ಲವೇ ಟೆಂಟ್
ಗಳಲ್ಲಿ ಅಶ್ಲೀಲ ಸಿನಿಮಾ ತೋರಿಸಿ ಮೇಲೆ ಬಂದ ಮಹಾನಾಯಕ ಇದನ್ನು ಹೇಳಿರಬೇಕು ಎಂದು ಪರೋಕ್ಷ ಟಾಂಗ್ ನೀಡಿ ವಾಗ್ದಾಳಿ ನಡೆಸಿದ್ದಾರೆ.
ತನಿಖಾ ಸಂಸ್ಥೆಯನ್ನು ರಚನೆ ಮಾಡಿರುವ ಸರಕಾರ, ರಾಹುಲ್ ಗಾಂಧಿಗೆ ನೋಟಿಸ್ ಕೊಟ್ಟು ಅವರ ಬಳಿ ಇರಬಹುದಾದ 400 ಪ್ರಕರಣಗಳ ಮಾಹಿತಿ ಸಂಗ್ರಹಿಸಬೇಕು ಎಂದರು.