ಹರಿಯಾಣ, ಮೇ.4(DaijiworldNews/AK): ಯುಪಿಎಸ್ಸಿ 2022 ರ ನಾಗರಿಕ ಸೇವಾ ಪರೀಕ್ಷೆಯಲ್ಲಿ ಟಾಪರ್ಗಳಲ್ಲಿ ಒಬ್ಬರಾದ ಕನಿಕಾ ಗೋಯಲ್, ಹರಿಯಾಣದ ಕೈತಾಲ್ನಿಂದ ಬಂದವರು. UPSC ನಾಗರಿಕ ಸೇವಾ ಪರೀಕ್ಷೆಯಲ್ಲಿ ತನ್ನ ಎರಡನೇ ಪ್ರಯತ್ನದಲ್ಲಿ ಒಂಬತ್ತನೇ ರ್ಯಾಂಕ್ ಗಳಿಸಿದ್ದಾರೆ. ತಂದೆ ತಾಯಿಗೆ ಒಬ್ಬಳೇ ಮಗುವಾದ ಆಕೆ ಏಳನೇ ತರಗತಿಯಿಂದಲೇ ಐಎಎಸ್ ಅಧಿಕಾರಿಯಾಗುವ ಕನಸು ಕಂಡವರು. ದಶಕದ ಪರಿಶ್ರಮದ ನಂತರ ಕೊನೆಗೂ ತನ್ನ ಕನಸನ್ನು ನನಸಾಗಿಸಿಕೊಂಡಳು. ಕನಿಕಾ ಅವರ ಸಕ್ಸಸ್ ಸ್ಟೋರಿ ಇಲ್ಲಿದೆ.
ಕನಿಕಾ ಅವರು ದೆಹಲಿ ವಿಶ್ವವಿದ್ಯಾಲಯದ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್ (SRCC) ನಲ್ಲಿ ತಮ್ಮ ಪದವಿಯನ್ನು ಪಡೆದರು, ತಮ್ಮ ತವರುಮನೆಯಲ್ಲಿ ಕೈತಾಲ್ನ ಹಿಂದೂ ಗರ್ಲ್ಸ್ ಸೀನಿಯರ್ ಸೆಕೆಂಡರಿ ಶಾಲೆಯಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಮುಗಿಸಿದರು. UPSC ಮೇನ್ಸ್ಗಾಗಿ, ಅವರು ರಾಜಕೀಯ ವಿಜ್ಞಾನ ಮತ್ತು ಅಂತರರಾಷ್ಟ್ರೀಯ ಸಂಬಂಧಗಳನ್ನು ತಮ್ಮ ಐಚ್ಛಿಕ ವಿಷಯಗಳಾಗಿ ಆಯ್ಕೆ ಮಾಡಿಕೊಂಡರು,
UPSC CSE 2021 ರಲ್ಲಿ ಅವರ ಮೊದಲ ಪ್ರಯತ್ನದಲ್ಲಿ, ಅವರು ಸಂದರ್ಶನ ಸುತ್ತಿಗೆ ಬಂದರು ಆದರೆ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ. ಬಳಿಕ ಕನಿಕಾ ಹೆಚ್ಚು ಅಧ್ಯಯನ ಮಾಡಲು ಪ್ರಾರಂಭಿಸಿದರು. ಆಹಾರ, ಮಲಗುವುದು, ಅಧ್ಯಯನ ಮತ್ತು ಇತರ ಕೆಲಸಗಳಂತಹ ವಿವಿಧ ಚಟುವಟಿಕೆಗಳಿಗೆ ಸಮಯ ನಿಗದಿಪಡಿಸಿದ ರು. ಅಲ್ಲದೇ ಆರೋಗ್ಯಕ್ಕೂ ಸಮಾನ ಪ್ರಾಮುಖ್ಯತೆಯನ್ನು ನೀಡಿದರು.
ಫಲಿತಾಂಶದ ದಿನದಂದು, ಅವರು ಟಾಪ್ 10 ರಲ್ಲಿ ಸ್ಥಾನ ಪಡೆದಿದ್ದಾರೆ ಎಂಬುವುದು ಅಸಾಧ್ಯಯವಾಯಿತು. ತನ್ನ ಮೊದಲ ಪ್ರಯತ್ನದಲ್ಲಿ ನಿರಾಶೆಯನ್ನು ಎದುರಿಸಿದ ಕನಿಕಾ ಕೊನೆಗೆ ತನ್ನ . ವೈಫಲ್ಯವನ್ನು ಪ್ರೇರಣೆ ಮತ್ತು ಶಕ್ತಿಯ ಮೂಲವಾಗಿ ತೆಗೆದುಕೊಂಡು ತನ್ನ ಕನಸು ನನಸು ಮಾಡಿಕೊಂಡರು.