ಬೆಂಗಳೂರು, ಮೇ.5(DaijiworldNews/AA): ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಲ್ಯೂ ಕಾರ್ನರ್ ನೊಟೀಸ್ ಜಾರಿ ಮಾಡಿದೆ. ಇಂಟರ್ ಪೋಲ್ ನವರು ಎಲ್ಲ ದೇಶಗಳಿಗೂ ಕಮ್ಯುನಿಕೇಟ್ ಮಾಡಿ ಲೊಕೇಟ್ ಮಾಡ್ತಾರೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಪ್ರಜ್ವಲ್ ರನ್ನು ಹೇಗೆ ಸೆಕ್ಯುರ್ ಮಾಡಿ ಕರೆತರಬೇಕು ಎಂಬ ಬಗ್ಗೆ ಎಸ್ಐಟಿ ನಿರ್ಧಾರ ಮಾಡುತ್ತದೆ. ಎಸ್ಐಟಿ ದಿನನಿತ್ಯ ಏನು ಮಾಡುತ್ತೆ ಎಂದು ನಾನು ವಕ್ತಾರನಂತೆ ವರದಿ ಒಪ್ಪಿಸಲು ಸಾಧ್ಯವಿಲ್ಲ, ಎಸ್ಐಟಿ ಅದರ ಕೆಲಸವನ್ನು ಮಾಡುತ್ತದೆ. ದೂರು ಬಂದ ಬಳಿಕ ಕಾನೂನು ಪ್ರಕಾರವೇ ಕ್ರಮ ಕೈಗೊಳ್ಳಲಾಗುತ್ತಿದೆ. ರೇವಣ್ಣ ಅವರನ್ನು ಮ್ಯಾಜಿಸ್ಟ್ರೇಟ್ ಮುಂದೆ ಪ್ರೊಡ್ಯೂಸ್ ಮಾಡುತ್ತಾರೆ. ಮುಂದೆ ಏನೇನು ಕ್ರಮ ಕೈಗೊಳ್ಳಬೇಕೋ ಅದನ್ನು ಮಾಡುತ್ತಾರೆ ಎಂದರು.
ಹೆಚ್ ಡಿ ರೇವಣ್ಣ ಅವರ ಬಂಧನವಾದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ರೇವಣ್ಣ ಅವರನ್ನು ಬಂಧಿಸಿದ್ದು ಸಹಜವಾಗಿ ಜೆಡಿಎಸ್ನವರಿಗೆ ಬೇಸರ ಆಗಿದೆ. ಆದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳದಿದ್ದರೆ ಮುದೊಂದು ದಿನ ಎಸ್ಐಟಿ ಮೇಲೂ ಆರೋಪ ಮಾಡಬಹುದು ಎಂದು ಹೇಳಿದರು.