ನವದೆಹಲಿ, ಮೇ.6(DaijiworldNews/AA): ಕಾಶ್ಮೀರದ ಪೂಂಚ್ ಸೆಕ್ಟರ್ ನಲ್ಲಿ ಭಾರತೀಯ ವಾಯುಸೇನೆಯ ವಾಹನದ ಮೇಲೆ ದಾಳಿ ಮಾಡಿ ಓರ್ವ ಯೋಧ ಹುತಾತ್ಮನಾದ ಘಟನೆ ಸಂಬಂಧಿಸಿದಂತೆ ದಾಳಿ ನಡೆಸಿದ ಇಬ್ಬರು ಪಾಕಿಸ್ತಾನೀ ಉಗ್ರಗಾಮಿಗಳ ಸ್ಕೆಚ್ ಅನ್ನು ಭದ್ರತಾ ಪಡೆಗಳು ಬಿಡುಗಡೆ ಮಾಡಿವೆ.
ಈ ಇಬ್ಬರು ಪಾಕಿಸ್ತಾನೀ ಉಗ್ರಗಾಮಿಗಳು ದಾಳಿಯ ರೂವಾರಿಗಳೆನ್ನಲಾಗಿದೆ. ಉಗ್ರರಿಗಾಗಿ ಘಟನೆ ನಡೆದ ಶಾಹಸಿತಾರ್ ಮೊದಲಾದ ಕಡೆ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ಇಬ್ಬರ ಬಗ್ಗೆ ಸುಳಿವು ನೀಡಿದವರಿಗೆ 20 ಲಕ್ಷ ರೂ ಬಹುಮಾನ ನೀಡುವುದಾಗಿ ಘೋಷಿಸಲಾಗಿದೆ.
ಮೇ 4 ರ ಸಂಜೆ ಪೂಂಚ್ ಜಿಲ್ಲೆಯ ಶಾಹಸಿತಾರ್ ಎಂಬಲ್ಲಿ ಹೋಗುತ್ತಿದ್ದ ವಾಯುಪಡೆ ವಾಹನದ ಮೇಲೆ ಉಗ್ರರು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ವಾಯುಪಡೆಯ ಕಾರ್ಪೊರಾಲ್ ಆಗಿದ್ದ ವಿಕ್ಕಿ ಪಹಾಡೆ ಹುತಾತ್ಮ ರಾಗಿದ್ದಾರೆ. ಹಾಗೂ ನಾಲ್ವರು ಯೋಧರು ಗಾಯಗೊಂಡಿದ್ದರು.