ಹರಿಯಾಣ, ಮೇ.7(DaijiworldNews/AK): ಐಎಎಸ್ ಅಧಿಕಾರಿ ಆಗುವ ಮೊದಲು ಇವರು ಐಆರ್ಎಸ್ ಸೇವೆಗೆ ಸೇರಿ ದೇಹಲಿ ಆದಾಯ ತೆರಿಗೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದವರು ಇವರು. ಕೆಲಸದ ಬಿಡಿವಿನ ವೇಳೆಯಲ್ಲಿ ಯೂಟ್ಯೂಬ್ ಬಳಕೆ ಮಾಡಿ ತಯಾರಿ ನಡೆಸುವುದರೊಂದಿಗೆ ಯುಪಿಎಸ್ಸಿ ಸಿಎಸ್ಇ ಪರೀಕ್ಷೆಯಲ್ಲಿ ದೇಶದ ಪ್ರಥಮ ರ್ಯಾಂಕ್ ಆದ ಯಶಸ್ಸಿನ ಕಥೆ.
ಐಎಎಸ್ ಆಫೀಸರ್ ಪ್ರದೀಪ್ ಸಿಂಗ್ 2019 ರಲ್ಲಿ ಯುಪಿಎಸ್ಸಿ ಸಿಎಸ್ಇ ಪರೀಕ್ಷೆ ಪಾಸ್ ಮಾಡಿದರು. ಅವರ ಈ ಫಲಿತಾಂಶ ಇಡೀ ದೇಶವೇ ತಿರುಗಿ ನೋಡುವಂತದ್ದು. ಅಖಿಲ ಭಾರತ ಫಲಿತಾಂಶ 1ನೇ ರ್ಯಾಂಕ್ ನೊಂದಿಗೆ ಯುಪಿಎಸ್ಸಿ ಪರೀಕ್ಷೆ ಪಾಸ್ ಮಾಡಿದ್ದರು.
ಪ್ರದೀಪ್ ಹರಿಯಾಣದ ಸೊನೆಪತ್ ಜಿಲ್ಲೆಯವರು. ಇವರು ಐಎಎಸ್ ಅಧಿಕಾರಿ ಆಗುವ ಮೊದಲು ದೆಹಲಿ ಆದಾಯ ತೆರಿಗೆ ಇಲಾಖೆಯಲ್ಲಿ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರ ತಂದೆ ಸುಖ್ಬಿರ್ ಸಿಂಗ್ ಒಬ್ಬ ರೈತ. ಪ್ರದೀಪ್ ಸಿಂಗ್ ಯುಪಿಎಸ್ಸಿ ಪರೀಕ್ಷೆ ಪಾಸ್ ಮಾಡಲು ದೊಡ್ಡ ಸ್ಫೂರ್ತಿ ಎಂದರೆ ಅವರ ತಂದೆಯೇ ಎಂದು ಹೇಳಿಕೊಂಡಿದ್ದಾರೆ.
ಪ್ರದೀಪ್ ಸಿಂಗ್ 7ನೇ ತರಗತಿ ವರೆಗೆ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದರು. ನಂತರದಲ್ಲಿ 12ನೇ ತರಗತಿವರೆಗೆ ಸೊನೆಪತ್ ಜಿಲ್ಲೆಯ ಶಂಭು ದಯಾಳ್ ಮಾರ್ಡನ್ ಸ್ಕೂಲ್ನಲ್ಲಿ ಓದಿದರು.
ಐಎಎಸ್ ಆಫೀಸರ್ ಪ್ರದೀಪ್ ಸಿಂಗ್ ಪ್ರಕಾರ ಅವರಿಗೆ ಯುಪಿಎಸ್ಸಿ ಪರೀಕ್ಷೆಗೆ ಅವರ ಮತ್ತೊಂದು ಕರ್ತವ್ಯದೊಂದಿಗೆ ತಯಾರಿ ನಡೆಸುವುದು ಹೆಚ್ಚು ಕಷ್ಟವೇ ಆಗಿತ್ತು. ಆದರೂ ಸಹ ಯಾವುದೇ ಕೋಚಿಂಗ್ ಸೆಂಟರ್ಗೆ ಸೇರದೆ ತಮ್ಮ ಸ್ವಯಂ ಅಧ್ಯಯನ ಮಾರ್ಗಗಳ ಮೂಲಕ ಸಕ್ಸಸ್ ಪಡೆದರು.
ಕೆಲಸದ ಬಿಡುವಿನ ವೇಳೆಯಲ್ಲಿ ಯುಪಿಎಸ್ಸಿ ಪರೀಕ್ಷೆಗೆ ಓದುತ್ತಿದ್ದರು. ಊಟದ ಸಮಯದಲ್ಲಿ ಹಾಗೂ ವಾಹನಗಳಲ್ಲಿ ಕಛೇರಿ / ಮನೆಗೆ ಪ್ರಯಾಣ ಮಾಡುವ ವೇಳೆ ಕೆಲವು ಸಂದರ್ಭಗಳಲ್ಲಿ ಯೂಟ್ಯೂಬ್ ಅನ್ನು ಹೆಚ್ಚಾಗಿ ಬಳಕೆ ಮಾಡಿ ಅಧ್ಯಯನ ನಡೆಸಿದರು.
ಗುರಿ ಮುಟ್ಟುವ ಛಲವೊಂದಿದ್ದರೆ ಸಾಕು, ಮಾರ್ಗಗಳು ಹಲವು ನಮ್ಮ ಅಂಗೈಯಲ್ಲಿಯೇ ಇರುತ್ತವೆ. ಜತೆಗೆ ಸ್ವಲ್ಪ ಪ್ರೋತ್ಸಾಹ ನೀಡುವವರು ಜತೆಗಿದ್ದರೆ ಸಾಕು. ನಮ್ಮ ಸಾಧನೆ ಇನ್ನು ಸುಲಲಿತವಾಗುತ್ತದೆ ಎಂಬುದಕ್ಕೆ ಐಎಎಸ್ ಪ್ರದೀಪ್ ಸಿಂಗ್ ಬೆಸ್ಟ್ ಉದಾಹರಣೆ.