ಬೆಂಗಳೂರು, ಮೇ.7(DaijiworldNews/AK):ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣವನ್ನುತನಿಖೆ ನಡೆಸುತ್ತಿರುವ ಎಸ್ಐಟಿ ತಂಡದ ಬಗ್ಗೆ ವಿಶ್ವಾಸ ಇರಲಿ ಎಂದು ರಾಜ್ಯ ಸರ್ಕಾರದ ಗೃಹ ಸಚಿವ ಜಿ ಪರಮೇಶ್ವರ್ ಮನವಿ ಮಾಡಿದ್ದಾರೆ.
ದೇವರಾಜೇಗೌಡರು ಕೊಟ್ಟಿರುವ ದೂರಿನಲ್ಲಿ ಡಿಕೆ ಶಿವಕುಮಾರ್ ಹೆಸರು ಇರುವ ಪ್ಯಾರಾವನ್ನು ಡಿಲೀಟ್ ಮಾಡಬೇಕೆಂದಿದ್ದ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ್, ಈ ಎಲ್ಲಾ ವಿಚಾರವನ್ನು ಎಸ್ಐಟಿಯವರು ಗಮನಿಸಿ ತನಿಖೆ ನಡೆಸುತ್ತಾರೆ ಎಂದು ಸಮಜಾಯಿಷಿ ನೀಡಿದ್ಧಾರೆ.ಪೆನ್ ಡ್ರೈವ್ ಕೇಸ್ನಲ್ಲಿ ಡಿಕೆಶಿ ಪಾತ್ರ ಇದೆ ಎನ್ನುವ ಆರೋಪದ ಬಗ್ಗೆಯೂ ಪರಮೇಶ್ವರ್ ಅವರು ಎಸ್ಐಟಿ ತನಿಖೆಯತ್ತಲೇ ಬೊಟ್ಟು ಮಾಡಿದ್ದಾರೆ.
ಸಿಬಿಐ ತನಿಖೆಗೆ ಆಗ್ರಹಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಗೃಹಸಚಿವರು, ಎಸ್ಐಟಿಯಂತಹ ಕಾನೂನಾತ್ಮಕ ಸಂಸ್ಥೆ ಮೇಲೆ ಅನುಮಾನ ಪಟ್ಟರೆ ಹೇಗೆ? ಎಸ್ಐಟಿಯಿಂದ ಮೊದಲು ತನಿಖೆ ಆಗಲಿ. ಸತ್ಯಾಂಶ ಹೊರಬರಲಿ. ಅದು ಪಬ್ಲಿಕ್ ಡೊಮೈನ್ಗೆ ಬಂದ ಬಳಿಕ ಚರ್ಚೆಯಾಗಲಿ ಎಂದಿದ್ದಾರೆ.
ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದವರು. ತನಿಖೆ ಹೇಗೆ ನಡೆಯುತ್ತೆ ಎಂದು ಅವರಿಗೆ ಗೊತ್ತಿದೆ. ಇಲ್ಲಿ ಯಾವುದನ್ನೂ ಮುಚ್ಚಿಡಲು ಆಗುವುದಿಲ್ಲ ಎಂದು ತಿಳಿಸಿದ್ದಾರೆ.