ಬೆಂಗಳೂರು, ಮೇ.7(DaijiworldNews/AK): ಮಹಿಳೆ ಕಿಡ್ನಾಪ್ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಮಾಜಿ ಸಚಿವ ಹೆಚ್.ಡಿ ರೇವಣ್ಣ ಆಸ್ಪತ್ರೆಗೆ ದಾಖಲಾಗಿದ್ದಾರೆ.
ರೇವಣ್ಣನಿಗೆ ಅಸಿಡಿಟಿ ಸಮಸ್ಯೆ ಕಾಣಿಸಿಕೊಂಡಿದೆ. ಅಲ್ಲದೇ ಚಿಕ್ಕದಾಗಿ ಹರ್ನಿಯಾ ಸಮಸ್ಯೆ ಇರೋದು ಪತ್ತೆಯಾಗಿದೆ. ಹೀಗಾಗಿ ವಿಕ್ಟೋರಿಯಾ ಗ್ಯಾಸ್ಟ್ರೋಎಂಟ್ರಾಲಜಿ ವೈದ್ಯರಿಂದ ತಪಾಸಣೆ ಮಾಡಿಸಲು ಹಾಗೂ ಕಾರ್ಡಿಯಾಲಜಿಸ್ಟರ್ ಓಪಿನಿಯನ್ ತೆಗೆದುಕೊಳ್ಳಲು ಬೌರಿಂಗ್ ಆಸ್ಪತ್ರೆಯ ವೈದ್ಯರು ಸೂಚನೆ ನೀಡಿದ್ದಾರೆ.
ವಿಕ್ಟೋರಿಯಾ ಆವರಣದ ಪಿಎಂಎಸ್ ವೈ ಆಸ್ಪತ್ರೆಯಲ್ಲಿ ಕಾರ್ಡಿಯಾಲಾಜಿಸ್ಟ್ ಮತ್ತು ಗ್ಯಾಸ್ಟ್ರೋ ಎಂಟ್ರೋಲಜಿಗೆ ನುರಿತ ತಜ್ಞರು ಇದ್ದು ವೈದ್ಯಕೀಯ ತಪಾಸಣೆ ನಡೆಸಲಿದ್ದಾರೆ ಎನ್ನಲಾಗಿದೆ.