ಮುಂಬೈ, ಮೇ.8(DaijiworldNews/AK): ಚಿಕನ್ ಶವರ್ಮ ಸೇವಿಸಿದ 19 ವರ್ಷದ ಯುವಕನೊಬ್ಬ ಮೃತಪಟ್ಟ ಘಟನೆ ನಡೆದಿದೆ. ಬಳಿಕ ಪೊಲೀಸರು ಇಬ್ಬರು ಮಾರಾಟಗಾರರನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಪ್ರಥಮೇಶ್ ಭೊಕ್ಸೆ ಎಂಬಾತ ಟ್ರಾಂಬೆ ಪ್ರದೇಶದ ಸ್ಟಾಲ್ನಿಂದ ಮೇ 3ರಂದು ಆಹಾರ ಖರೀದಿಸಿದ್ದರೆಂದು ತಿಳಿದು ಬಂದಿದೆ. ಮರುದಿನವೇ ಆತನಿಗೆ ಹೊಟ್ಟೆ ನೋವು, ವಾಂತಿ ಸಮಸ್ಯೆ ಕಾಣಿಸಿಕೊಂಡು ಹತ್ತಿರದ ಮುನಿಸಿಪಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮತ್ತೆ ಅದೇ ಸಮಸ್ಯೆ ಕಾಡಿದಾಗ ಮೇ 5ರಂದು ಕೆಇಎಂ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಚಿಕಿತ್ಸೆ ಪಡೆದು ಮನೆಗೆ ಮರಳಿದರೂ ಸಮಸ್ಯೆ ಮುಂದುವರಿದಾಗ ಮತ್ತೆ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಅವರು ಸೋಮವಾರ ಮೃತಪಟ್ಟಿದ್ದಾರೆ.