ಬೆಂಗಳೂರು, ಮೇ 9 (DaijiworldNews/ AK): ಪ್ರಜ್ವಲ್ ರೇವಣ್ಣ ಪ್ರಕರಣದ ನಂತರ ಬಿಜೆಪಿ, ಜೆಡಿಎಸ್ ಜೊತೆ ಅಂತರ ಕಾಯ್ದುಕೊಳ್ಳುತ್ತಿದೆ ಎಂದು ಹರಡಿರುವ ಸುದ್ದಿಯನ್ನು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿಟಿ ದೇವೇಗೌಡ ತಳ್ಳಿಹಾಕಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ದೇಶವನ್ನೇ ಅಳುತ್ತಿದ್ದಾರೆ, ತಮ್ಮ ಜೊತೆ ಮೈತ್ರಿ ಮಾಡಿಕೊಂಡ ಯಾವ ಪಕ್ಷವನ್ನೂ ಅವರು ಯಾವತ್ತೂ ಕೈ ಬಿಟ್ಟಿಲ್ಲ ಎಂದರು.
ನಾವು ಪ್ರಜ್ವಲ್ ನನ್ನು ಸಮರ್ಥಿಸಿಕೊಂಡಿದ್ದರೆ, ನಮ್ಮಿಂದ ತಪ್ಪಾಗಿದ್ದರೆ ಅವರು ಮೈತ್ರಿ ಕೊನೆಗಾಣಿಸುವ ಬಗ್ಗೆ ಯೋಚನೆ ಮಾಡುತ್ತಿದ್ದರು, ತಪ್ಪು ಯಾರೇ ಮಾಡರಲಿ ಅವರಿಗೆ ಶಿಕ್ಷೆಯಾಗಬೇಕೆನ್ನುವುದು ಪಕ್ಷದ ನಿಲುವಾಗಿದೆ ಹಾಗಾಗಿ, ಮೈತ್ರಿ ಯಾವುದೇ ಧಕ್ಕೆ ಇಲ್ಲ ಎಂದು ದೇವೇಗೌಡ ಹೇಳಿದರು. ಸಂತ್ರೆಸ್ತೆಯರನ್ನು ಸಂತೈಸುವ ಕೆಲಸ ಕುಮಾರಸ್ವಾಮಿಯವರಿಂದ ಆಗಬೇಕು ಎಂದು ಕಾಂಗ್ರೆಸ್ ನಾಯಕರು ಹೇಳಿರುವುದಕ್ಕೆ ಅದು ಸರ್ಕಾರದ ಕೆಲಸ ಮತ್ತು ಜವಾಬ್ದಾರಿ, ಕುಮಾರಸ್ವಾಮಿ ಯಾಕೆ ಮಾಡಬೇಕು? ಎಂದು ಪ್ರಶ್ನಿಸಿದರು.