ಲಖನೌ, ಮೇ.11(DaijiworldNews/AA): ನರೇಂದ್ರ ಮೋದಿಯವರು ಪ್ರಧಾನಿಯಲ್ಲ. ಅವರು ಚಕ್ರವರ್ತಿ. ಮೋದಿ ಟೆಂಪೊ ಬಿಲಿಯನೆರ್ಗಳ ಕೈಗೊಂಬೆ ಚಕ್ರವರ್ತಿ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ.
ಅದಾನಿ ಹಾಗೂ ಅಂಬಾನಿಗಳಿಂದ ನಗದು ತುಂಬಿದ ಟೆಂಪೊಗಳು ಕಾಂಗ್ರೆಸ್ಗೆ ಸಂದಿವೆ ಎನ್ನುವ ಮೋದಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಸಚಿವ ಸಂಪುಟ, ಸಂಸತ್ ಹಾಗೂ ಸಂವಿಧಾನಕ್ಕೂ ಪ್ರಧಾನಿ ಮೋದಿಗೂ ಯಾವುದೇ ಸಂಬಂಧವಿಲ್ಲ. ಅವರು 21ನೇ ಶತಮಾನದ ಚಕ್ರವರ್ತಿ. ಎರಡೂರು ಶ್ರೀಮಂತರಿಗಷ್ಟೇ ನಿಜವಾದ ಶಕ್ತಿ ಇದೆ ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಅದಾನಿ ಹಾಗೂ ಅಂಬಾನಿ ಜೊತೆ ಕಾಂಗ್ರೆಸ್ ಒಪ್ಪಂದ ಮಾಡಿಕೊಂಡಿದೆ. ಟೆಂಪೊ ತುಂಬ ಕಪ್ಪು ಹಣ ಸಂದಾಯವಾಗಿದೆ. ಹೀಗಾಗಿ ಅವರ ವಿರುದ್ಧ ಮಾತಾನಾಡುವುನ್ನು ನಿಲ್ಲಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಹುಲ್ ಗಾಂಧಿ ವಿರುದ್ಧ ಆರೋಪ ಮಾಡಿದ್ದರು.