ಹಾಸನ, ಮೇ.11(DaijiworldNews/AA): ಅತ್ಯಾಚಾರ ಆರೋಪ ಪ್ರಕರಣದಲ್ಲಿ ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.
ಪ್ರಿನ್ಸಿಪಲ್ ಸಿ.ಜೆ, ಜೆಎಂಎಫ್ಸಿ ಜಡ್ಜ್ ಸಿದ್ದರಾಮ.ಎಸ್ ಆದೇಶ ಹೊರಡಿಸಿದ್ದು, ಹೊಳೆನರಸೀಪುರದ ಜಡ್ಜ್ ನಿವಾಸದಲ್ಲಿ ದೇವರಾಜೇಗೌಡ ಅವರನ್ನು ಹಾಜರುಪಡಿಸಲಾಗಿತ್ತು. ದೇವರಾಜೇಗೌಡ ಅವರ ವಿರುದ್ಧ ಅತ್ಯಾಚಾರ ಕೇಸ್ ದಾಖಲಾಗುತ್ತಿದ್ದಂತೆ ಚಿತ್ರದುರ್ಗದ ಹಿರಿಯೂರು ಬಳಿ ವಶಕ್ಕೆ ಪಡೆಯಲಾಗಿತ್ತು.
ನಿನ್ನೆ ಸಂಜೆ ದೇವರಾಜೇಗೌಡ ಅವರು ಮತ್ತೆರೆಡು ಆಡಿಯೋ ಹಾಗೂ ವಿಡಿಯೋವನ್ನು ಬಿಡುಗಡೆ ಮಾಡಿದ್ದರು ಎನ್ನಲಾಗಿದೆ. ಇದಾದ ಕೆಲ ನಿಮಿಷಗಳ ಬಳಿಕ ಮೊಬೈಲ್ ಲೋಕೇಶನ್ ಆಧಾರದಲ್ಲಿ ದೇವರಾಜೇಗೌಡ ಅವರನ್ನು ಶುಕ್ರವಾರ ರಾತ್ರಿ ಬಂಧಿಸಲಾಗಿತ್ತು. ಇಂದು ಹೊಳೆನರಸೀಪುರದಲ್ಲಿ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ ಬಳಿಕ ಬಂಧಿಸಲಾಗಿದೆ.