ಕೋಲ್ಕತ್ತಾ, ಮೇ.12(DaijiworldNews/AK): ಕಾಂಗ್ರೆಸ್ ಸೇರಿದಂತೆ ಇಂಡಿಯಾ ಒಕ್ಕೂಟ ರಹಸ್ಯವಾಗಿ ಭ್ರಷ್ಟಾಚಾರಗಳಲ್ಲಿ ತೊಡಗಿದ್ದರೆ, ತೃಣಮೂಲ ಕಾಂಗ್ರೆಸ್ ಪಕ್ಷ ಹಗರಣ ಮಾಡುವುದನ್ನೇ ಫುಲ್ ಟೈಮ್ ಬಿಸಿನೆಸ್ ಆಗಿ ಮಾಡಿಕೊಂಡಿದೆ ಎಂದು ಪ್ರಧಾನಿ ಮೊದಿ ವಾಗ್ದಾಳಿ ನಡೆಸಿದ್ದಾರೆ.
4ನೇ ಹಂತದ ಮತದಾನಕ್ಕೂ ಮುನ್ನಾದಿನ ಪಶ್ಚಿಮ ಬಂಗಾಳದಲ್ಲಿನಡೆದ ನಾಲ್ಕು ಚುನಾವಣಾ ರ್ಯಾಲಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಮಮತಾ ಬ್ಯಾನರ್ಜಿ ಸರ್ಕಾರ ಹಾಗೂ ಇಂಡಿಯಾ ಒಕ್ಕೂಟದ ವಿರುದ್ಧ ಕಿಡಿಕಾರಿದ್ದಾರೆ.
ಟಿಎಂಸಿ ಪೂರ್ಣ ಸಮಯವನ್ನು ಹಗರಣ ಮಾಡುವುದನ್ನೇ ವ್ಯವಹಾರವನ್ನಾಗಿ ಮಾಡಿಕೊಂಡಿದೆ. ಕಾಂಗ್ರೆಸ್ , ಇಂಡಿಯಾ ಒಕ್ಕೂಟ ಯಾವುದೇ ಪಕ್ಷವಾಗಿರಲಿ. ಅವರೆಲ್ಲರಿಗೂ ಭ್ರಷ್ಟಾಚಾರ ಮಾಡುವುದು ಸಾಮಾನ್ಯ ಗುಣವಾಗಿಬಿಟ್ಟಿದೆ. ಇಂಡಿಯಾ ಒಕ್ಕೂಟದಲ್ಲಿ ಹೆಚ್ಚಿನ ಮಿತ್ರಪಕ್ಷಗಳು ರಹಸ್ಯವಾಗಿ ಹಗರಣಗಳನ್ನು ಮಾಡುತ್ತಿದ್ದರೆ, ಟಿಎಂಸಿ ಮುಕ್ತ ಉದ್ಯಮವನ್ನಾಗಿಯೇ ಅದನ್ನು ನಡೆಸುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.