ನವದೆಹಲಿ, ಮೇ.19(DaijiworldNews/AK): ಎಎಪಿ ಸಂಸದೆ ಸ್ವಾತಿಮಾಲಿವಾಲ್ ಅವರ ಮೇಲೆ ಹಲ್ಲೆ ಪ್ರಕರಣ ಸಂಬಂಧ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಆಪ್ತ ಬಿಭವ್ ಕುಮಾರ್ ಅವರನ್ನು ಇಲ್ಲಿನ ನ್ಯಾಯಲಯ ಐದು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಪ್ರಕರಣ ಸಂಬಂಧ ದೆಹಲಿ ಪೊಲೀ ಸರು ಸಲ್ಲಿಸಿದ್ದ ಅರ್ಜಿ ಯ ವಿಚಾರಣೆಯನ್ನು ಮೆಟ್ರೊಪಾಲಿಟನ್ಮ್ಯಾಜಿಸ್ಟ್ರೇ ಟ್ ಗೌರವ್ ಗೋ ಯಲ್ ಅವರು ನಡೆಸಿದರು. ಪೊಲೀಸರು ಏಳು ದಿನ ಕಸ್ಟಡಿಗೆ ನೀಡಬೇ ಕು ಎಂದು ಕೋರಿದ್ದರು.
ಉಭಯ ಪಕ್ಷಗಾರರ ವಾದವನ್ನು ಆಲಿಸಿದ ಬಳಿಕ, ಈ ಪ್ರಕರಣದಲ್ಲಿ ಆರೋ ಪಿಯನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸುವುದು ಅನಿವಾರ್ಯ ಎಂದು ನಾನು ಮನಗಂಡಿದ್ದೇ ನೆ. ಹೀ ಗಾಗಿ ಐದು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸುತ್ತಿದ್ದೇ ನೆ ಎಂದು ತೀರ್ಪು ನೀಡುವಾಗ ಹೇಳಿದ್ದಾರೆ.
ಸಾಕ್ಷ್ಯ ಸಂಗ್ರಹಿಸಲು ಬಿಭವ್ ಕುಮಾರ್ ಅವರನ್ನು ಮುಂಬೈ ಹಾಗೂ ರಾಜಧಾನಿಯ ಇನ್ನಿತರ ಸ್ಥಳಗಳಿಗೆ ಕರೆದುಕೊಂಡು ಹೋಗಬೇಕಾಗಿದೆ. ಕಸ್ಟಡಿಗೆ ಪಡೆಯದೆ ಅದು ಸಾಧ್ಯವಿಲ್ಲ ಎಂದು ಪ್ರಾಸಿಕ್ಯೂಷನ್ನ ವಾದವನ್ನು ನ್ಯಾಯಾಲಯ ಪರಿಗಣಿಸಿತು.
ಸದ್ಯ ಪ್ರಕರಣ ಪ್ರಾರಂಭಿಕ ಹಂತದಲ್ಲಿ ಇದ್ದು, ಎಫ್ಐಆರ್ ನಲ್ಲಿ ಮಾಡಲಾಗಿರುವ ಆರೋ ಪ ಸ್ವಾತಿಮಾಲಿವಾಲ್ ಅವರ ಹೇಳಿಕೆಗೆ ತಾಳೆಯಾಗಬೇಕು’ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.