ಕೋಲ್ಕತ್ತಾ, ಮೇ 19(DaijiworldNews/AA): ಇಂಡಿಯಾ ಒಕ್ಕೂಟಕ್ಕೆ ಮಮತಾ ಬ್ಯಾನರ್ಜಿ ಅವರು ಸೇರುವ ಬಗ್ಗೆ ಅಧೀರ್ ರಂಜನ್ ಚೌಧರಿ ಅವರು ನಿರ್ಧಾರ ಮಾಡುವುದಿಲ್ಲ ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಯನ್ನು ವಿರೋಧಿಸಿ ಖರ್ಗೆಯವರ ಚಿತ್ರಕ್ಕೆ ಕೊಲ್ಕತ್ತಾದಲ್ಲಿ ಮಸಿ ಬಳಿಯಲಾಗಿದೆ.
ಕೋಲ್ಕತ್ತಾದಲ್ಲಿನ ಕಾಂಗ್ರೆಸ್ ರಾಜ್ಯ ಕಚೇರಿಯ ಮುಂಭಾಗದಲ್ಲಿದ್ದ ಹಲವು ಪೋಸ್ಟರ್ ಗಳಿಗೆ ಮಸಿ ಬಳಿಯಲಾಗಿದೆ. ಜೊತೆಗೆ ಈ ಪೋಸ್ಟರ್ ಮೇಲೆ ತೃಣಮೂಲ ಕಾಂಗ್ರೆಸ್ ನ ಏಜೆಂಟ್ ಎಂದು ಬರೆಯಲಾಗಿದೆ.
ಇನ್ನು ಈ ಘಟನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅಧೀರ್ ರಂಜನ್ ಅವರು ಪೊಲೀಸರಿಗೆ ದೂರು ನೀಡುವಂತೆ ಪಕ್ಷದ ಕಾರ್ಯಕರ್ತರಿಗೆ ತಿಳಿಸಿದ್ದಾರೆ. ಹಾಗೇ ಈ ಪೋಸ್ಟರ್ ಗಳನ್ನು ತೆರವುಗೊಳಿಸುವಂತೆ ಸೂಚಿಸಿದ್ದಾರೆ.