ಬೆಂಗಳೂರು,ಮೇ. 21(DaijiworldNews/AK): ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ನಡೆಸುವ ಹೊರಗುತ್ತಿಗೆ ನೌಕರರ ನೇಮಕಾತಿಯಲ್ಲಿ ಮೀಸಲಾತಿಯನ್ನು ಕಡ್ಡಾಯವಾಗಿ ಪಾಲಿಸುವಂತೆ ಸರ್ಕಾರ ಆದೇಶ ಹೊರಡಿಸಿದೆ. ಮೀಸಲಾತಿ ಕಲ್ಪಿಸುವಾಗಲೂ ಶೇ 33ರಷ್ಟು ಮಹಿಳೆಯರಿಗೆ ಮೀಸಲಿಡುವಂತೆಯೂ ಸೂಚಿಸಿದೆ.
ಇದೇ ಮೊದಲ ಬಾರಿ ಸರ್ಕಾರ ಹೊರಗುತ್ತಿಗೆಯಲ್ಲೂ ಮೀಸಲಾತಿಯನ್ನ ಜಾರಿ ಮಾಡಿದೆ. ಸರ್ಕಾ ರಿ ಇಲಾಖೆಗಳಲ್ಲಿ ವಿವಿಧ ಹಂತದ ಸಿಬ್ಬಂದಿ ನೇಮಕಾತಿಯನ್ನು ಹೊರಗುತ್ತಿಗೆ ಆಧಾರದಲ್ಲಿ ವಿವಿಧ ಏಜೆನ್ಸಿಗಳ ಮೂಲಕ ನೇಮಕ ಮಾಡಿಕೊಳ್ಳುತ್ತಿರುವುದರಿಂದ ಮೀ ಸಲಾತಿ ಸಿಗುತ್ತಿಲ್ಲ. ಏಜೆನ್ಸಿಗಳು ತಮಗೆ ಬೇಕಾದವರಿಗೆ ಉದ್ಯೋಗ ನೀಡುತ್ತಿರುವುದರಿಂದ ಪರಿಶಿಷ್ಟ ಜಾತಿ ಪಂಗಡ ಹಾಗೂ ಹಿಂ ದುಳಿದ ವರ್ಗಕ್ಕೆ ಸೇ ರಿದ ಸಮುದಾಯದವರು ಉದ್ಯೋ ಗದಿಂದ ವಂಚಿತರಾಗುತ್ತಿದ್ದಾರೆ.
ಹೀಗಾಗಿ 2023ರ ಡಿಸೆಂಬರ್ 21ರಂ ದು ನಡೆದ ಸಚಿವ ಸಂಪುಟ ಸಭೆಯಲ್ಲಿ ಹೊರಗುತ್ತಿಗೆಯಲ್ಲೂ ಮೀ ಸಲಾತಿ ನೀತಿಯನ್ನು ಜಾರಿಗೊಳಿಸುವ ಪ್ರಸ್ತಾವನೆಗೆ ಅಂಗೀಕಾರ ನೀ ಡಲಾಗಿತ್ತು. ಪ್ರಸ್ತುತ ಜಾರಿಯಲ್ಲಿರುವ ಮೀಸಲಾತಿ ನಿಯಮವನ್ನು ಹೊರಗುತ್ತಿಗೆ ನೌಕರ ನೇಮಕಾತಿಗೂ ಕಡ್ಡಾಯವಾಗಿ ಅನ್ವಯಿಸಬೇಕು. ಅದಕ್ಕೆ ಕೆಲವು ಸೂಚನೆಗಳನ್ನು ಪಾಲನೆ ಮಾಡಬೇ ಕು ಎಂದು ಸಿಬ್ಬಂ ದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸೋಮವಾರ ಹೊರಡಿಸಿದೆ ಸುತ್ತೋಲೆಯಲ್ಲಿ ನಿರ್ದೇ ಶನ ನೀ ಡಿದೆ.
ಹೊರಗುತ್ತಿಗೆ ಸಿಬ್ಬಂದಿ ಒದಗಿಸುವ ಏಜೆನ್ಸಿ ನೀಡುವ ಸಿಬ್ಬಂದಿಯ ಜಾತಿ ಪ್ರಮಾಣಪತ್ರ ಮತ್ತು ಇತರೆ ದಾಖಲೆಗಳನ್ನು ಟೆಂಡರ್ ಅಂಗೀಕರಿಸುವ ಪ್ರಾಧಿಕಾರವು ಪರಿಶೀಲಿಸಿಯೇ ಕ್ರಮವಹಿಸಬೇಕು.
ಯಾವುದೇ ಇಲಾಖೆಯಲ್ಲಿ 20 ಅಥವಾ ಅದಕ್ಕಿಂ ತ ಅಧಿಕ ಅಭ್ಯರ್ಥಿ ಗಳನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕಮಾಡಿಕೊಳ್ಳುವ ಸಂ ದರ್ಭ ದಲ್ಲಿ ಮಾತ್ರ ಮೀ ಸಲಾತಿ ನೀತಿ ಜಾರಿ. ಅಭ್ಯರ್ಥಿ ಯ ಕನಿಷ್ಠ ವಯೋ ಮಿತಿ 18 ವರ್ಷ ಮತ್ತು ಗರಿಷ್ಠ ವಯೋ ಮಿತಿ 60 ವರ್ಷ ಆಗಿರುತ್ತದೆ. ಸಾಮಾಜಿಕ ನ್ಯಾಯ ಮತ್ತು ಸಮಾನ ಉದ್ಯೋಗಾವಕಾಶಗಳನ್ನು ಒದಗಿಸುವ ಉದ್ದೇಶದಿಂದ ಜಾರಿಗೆ ತರಲಾಗುವ ಈ ನಿಯಮಗಳಡಿ ನೇಮಕಾತಿ ಆದವರನ್ನು ಕಾಯಂಗೆ ಪರಿಗಣಿಸುವಂತಿಲ್ಲ ಈ ಸೂಚನೆಗಳು ಸರ್ಕಾರದ ಎಲ್ಲ ಇಲಾಖೆಗಳು, ಸ್ವಾಯತ್ತ ಸಂಸ್ಥೆಗಳು, ನಿಗಮ, ಮಂಡಳಿಗಳು, ವಿಶ್ವವಿದ್ಯಾಲಯಗಳಿಗೆ ಅನ್ವಯವಾಗಲಿದೆ ಎಂದು ತಿಳಿಸಲಾಗಿದೆ.