ಉತ್ತರ ಪ್ರದೇಶ, ಮೇ 21 (DaijiworldNews/AA): ಪೂರ್ವಾಂಚಲ ಚುನಾವಣೆ ನಡೆಯುವಾಗ ಬಿಜೆಪಿ ವಿರುದ್ಧ ಆರಂಭವಾದ ಮತದಾನ ಕೊನೆಯವರೆಗೂ ನಡೆಯಲಿದ್ದು, ಏಳನೇ ಹಂತ ಮುಗಿಯುವ ವೇಳೆಗೆ ಬಿಜೆಪಿ ಸರ್ವನಾಶವಾಗಲಿದೆ ಎಂದು ಮಾಜಿ ಸಿಎಂ ಅಖಿಲೇಶ್ ಯಾದವ್ ಹೇಳಿದ್ದಾರೆ.
ಉತ್ತರ ಪ್ರದೇಶದ ಅಜಂಗಢದಲ್ಲಿ ಚುನಾವಣಾ ರ್ಯಾಲಿ ಬಳಿಕ ಮಾತನಾಡಿದ ಅವರು, ಇದೀಗ ನಡೆಯುತ್ತಿರುವ ಲೋಕಸಭೆ ಚುನಾವಣೆಯಲ್ಲಿ ಸಾರ್ವಜನಿಕರು ಬಿಜೆಪಿಯನ್ನು 140 ಸ್ಥಾನಗಳಿಗೆ ಪರದಾಡುವಂತೆ ಮಾಡುತ್ತಾರೆ ಎಂದು ತಿಳಿಸಿದ್ದಾಋಎ.
ಇದೀಗ ನಡೆಯುತ್ತಿರುವ ಚುನಾವಣೆಗಳು ಮತ್ತು ಬಿಜೆಪಿಯ '400-ಪಾರ್' ಘೋಷಣೆ ಕುರಿತು ಪ್ರಯಿಕ್ರಿಯೆ ನೀಡಿದ ಅವರು, ಬಿಹಾರದ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್, ಇಂಡಿಯಾ ಮೈತ್ರಿಕೂಟವು 300 ಸೀಟುಗಳು ದಾಟಿದೆ. ಇಂಡಿಯಾ ಒಕ್ಕೂಟದ ಸರ್ಕಾರ ಖಂಡಿತ ರಚನೆಯಾಗುತ್ತದೆ ಎಂದು ತಿಳಿದಿರುವ ಕಾರಣ ಪ್ರಧಾನಿ ಮೋದಿಗೆ ಹೇಳಲು ಏನೂ ಉಳಿದಿಲ್ಲ. ಎನ್ ಡಿಎ ಸರ್ಕಾರವು 400 ಪಡೆಯುವುದಿರಲಿ ಅವರಿಗೆ 240 ಸ್ಥಾನ ಪಡೆಯುವುದು ಕೂಡ ಕಷ್ಟವಾಗುತ್ತದೆ ಎಂದರು.