ದೆಹಲಿ, ಮೇ.22 (DaijiworldNews/AA): ಎಎಪಿ ಸಂಸದೆ ಸ್ವಾತಿ ಮಲಿವಾಲ್ ಪ್ರಕರಣವು ನ್ಯಾಯಯುತವಾಗಿ ತನಿಖೆಯಾಗಬೇಕು ಎಂದು ಹೇಳುವ ಮೂಲಕ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಮೊದಲ ಬಾರಿಗೆ ಕೇಸ್ ಸಂಬಂಧ ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದಾರೆ.
ಹಲ್ಲೆ ಪ್ರಕರಣದಲ್ಲಿ ಎರಡೂ ಕಡೆಯಿಂದ ದೂರುಗಳಿವೆ. ಆದರೆ ನಾನು ನ್ಯಾಯಯುತ ತನಿಖೆಯನ್ನು ನಿರೀಕ್ಷಿಸುತ್ತೇನೆ. ನ್ಯಾಯವನ್ನು ಒದಗಿಸಬೇಕು. ಪೊಲೀಸರು ಎರಡೂ ಆವೃತ್ತಿಗಳನ್ನು ನ್ಯಾಯಯುತವಾಗಿ ತನಿಖೆ ಮಾಡಬೇಕು ಮತ್ತು ನ್ಯಾಯ ಒದಗಿಸಬೇಕು. ಇನ್ನು ಈ ಘಟನೆ ನಡೆದಾಗ ನಾವು ಸ್ಥಳದಲ್ಲಿ ಇರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಚಿವೆ ಅತಿಶಿ, ಸೌರಭ್ ಭಾರದ್ವಾಜ್, ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಅವರು ಈ ವಿಷಯದ ಬಗ್ಗೆ ಪಕ್ಷದ ನಿಲುವನ್ನು ಇಲ್ಲಿಯವರೆಗೆ ಮುಂದಿಟ್ಟಿದ್ದರೂ ಕೇಜ್ರಿವಾಲ್ ಬಗ್ಗೆ ಮಾತನಾಡಿರಲಿಲ್ಲ. ಬುಧವಾರ, ಈ ವಿಷಯ ಕಾನೂನಿನ ಮುಂದೆ ಇದೆ. ನನ್ನ ಹೇಳಿಕೆಯು ಪ್ರಕ್ರಿಯೆಯ ಮೇಲೆ ಪರಿಣಾಮ ಬೀರಬಹುದು. ನಾನು ನ್ಯಾಯಯುತ ತನಿಖೆಯನ್ನು ನಿರೀಕ್ಷಿಸುತ್ತೇನೆ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.