ನವದೆಹಲಿ, ಮೇ 27 (DaijiworldNews/AA): ಜಿಯೋ ತರುವ ಮೂಲಕ ಭಾರತದ ಟೆಲಿಕಾಂ ವಲಯದಲ್ಲಿ ಮುಕೇಶ್ ಅಂಬಾನಿ ಅವರು ಸಂಚಲನ ಸೃಷ್ಟಿಸಿದ್ದರು. ಇದೀಗ ಆಫ್ರಿಕಾದಲ್ಲಿ ಮೊಬೈಲ್ ಬ್ರಾಡ್ಬ್ಯಾಂಡ್ ಸರ್ವಿಸ್ ಬಿಸಿನೆಸ್ ಪ್ರಾರಂಭಿಸಲಿದ್ದಾರೆ ಎಂದು ತಿಳಿದುಬಂದಿದೆ.
ರಿಲಾಯನ್ಸ್ ಇಂಡಸ್ಟ್ರೀಸ್ಗೆ ಸೇರಿದ ರಾಡಿಸಿಸ್ ಕಾರ್ಪ್ ಸಂಸ್ಥೆ ಘಾನಾ ದೇಶದ ಹೊಸ ಸ್ಟಾರ್ಟಪ್ ಆದ ನೆಕ್ಸ್ಟ್ ಜೆನ್ ಇನ್ಫ್ರಾಕೋ ಎಂಬ ಕಂಪನಿಯೊಂದಿಗೆ ಸಹಭಾಗಿತ್ವ ಮಾಡಿಕೊಳ್ಳುತ್ತಿದೆ. ಈ ಎರಡು ಕಂಪನಿಗಳು ಜಂಟಿಯಾಗಿ ಘಾನಾದಲ್ಲಿ 5ಜಿ ಬ್ರಾಡ್ಬ್ಯಾಂಡ್ ಸರ್ವಿಸ್ ಬಿಸಿನೆಸ್ ಪ್ರಾರಂಭಿಸಲಿದೆ.
15 ವರ್ಷಗಳಿಗೆ 5ಜಿ ಬ್ರಾಡ್ಬ್ಯಾಂಡ್ ಸರ್ವಿಸ್ ಒದಗಿಸಲು ಲೈಸೆನ್ಸ್ ಹೊಂದಿರುವ ಎನ್ಜಿಐಸಿ ಸಂಸ್ಥೆಯು 2024ರ ಒಳಗೆ ಕಾರ್ಯಾಚರಣೆ ಪ್ರಾರಂಭಿಸಬಹುದು ಎನ್ನಲಾಗಿದೆ. ಈ ಸಂಸ್ಥೆಗೆ ಮೈಕ್ರೋಸಾಫ್ಟ್, ಟೆಕ್ ಮಹೀಂದ್ರ, ನೋಕಿಯಾ ಓಯ್ಜ್ ನಂತಹ ದೊಡ್ಡ ಸಂಸ್ಥೆಗಳೂ ಸಹಕಾರ ನೀಡಿದೆ. ಮೂರು ವರ್ಷಗಳಿಗೆ 145 ಮಿಲಿಯನ್ ಡಾಲರ್ನಷ್ಟು ಬಂಡವಾಳ ವ್ಯಯಿಸಲಿದೆ. ಎನ್ಜಿಐಸಿ ಸಂಸ್ಥೆಯ ಮೂಲಕ ಅಂಬಾನಿ ಅವರು ಘಾನದಲ್ಲಿ ಟೆಲಿಕಾಂ ವಲಯದಲ್ಲಿ ಸಂಚಲನ ಸೃಷ್ಟಿಸಲಿದ್ದಾರಾ ಎಂದು ಕಾದುನೋಡಬೇಕಿದೆ.